ಡಾ.ಮಲ್ಲಿಕಾ ಎಸ್. ಘಂಟಿ

 

 

ವಿಜಯಪುರಜಿಲ್ಲೆಯ ಬಸವನಬಾಗೇವಾಡಿತಾಲೂಕಿನ ಅಗಸಬಾಳು ಇವರ ಹುಟ್ಟೂರು. ಧಾರವಾಡದಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ’ವೆಂಬ ವಿಷಯಕ್ಕೆಡಾಕ್ಟರೇಟ್ ಪದವಿ ಪಡೆದಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಸ್ನಾತಕೋತ್ತರಕೇಂದ್ರ ನಂದಿಹಳ್ಳಿಗಳಲ್ಲಿ ಪ್ರಾಧ್ಯಾಪಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರುಡೀನ್ ಆಗಿ, ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಆಡಳಿತಾನುಭವವನ್ನು ಪಡೆದುಕೊಂಡವರು.ಕನ್ನಡ ವಿಶ್ವವಿದ್ಯಾನಿಲಯ, ಹಂಪಿಯ ಕುಲಪತಿಗಳಾಗಿ ೨೦೧೫ರಲ್ಲಿ ಅಧಿಕಾರ ವಹಿಸಿಕೊಂಡ ಇವರು ಈಗ ಎರಡನೆಯಅವಧಿಗೆ ಕುಲಪತಿಗಳಾಗಿ ಮುಂದುವರಿದಿದ್ದಾರೆ.ಪ್ರಾಧ್ಯಾಪಕಿ, ಸಾಹಿತಿ, ವಿಮರ್ಶಕಿ, ಸಂಶೋಧಕಿ, ಸಂಪಾದಕಿಯಾಗಿ ಬಹುಮುಖ ಪ್ರತಿಭೆಯಡಾ.ಮಲ್ಲಿಕಾಎಸ್. ಘಂಟಿಯವರು ಸಮರ್ಥ ಆಡಳಿತಗಾರರಾಗಿಯೂ ಸಂಘಟಕರಾಗಿಯೂಕನ್ನಡಪರಹೋರಾಟಗಾರರಾಗಿಯೂ ಹೆಸರುವಾಸಿಯಾದವರು.’ತುಳಿಯದಿರಿ ನನ್ನ’, ‘ಈ ಹೆಣ್ಣುಗಳೆ ಹೀಗೆ’, ‘ರೊಟ್ಟಿ ಮತ್ತು ಹುಡುಗಿ’, ‘ಬೆಲ್ಲದಚ್ಚುಇರುವೆದಂಡು’ಇವರ ಕವನ ಸಂಕಲನಗಳು.’ಚಾಜ’, ‘ಒಂದು ಬಾವಿಯ ಸುತ್ತ’ಗಳೆಂಬ ನಾಟಕಗಳನ್ನು ರಚಿಸಿದ ಇವರು’ಅಹಲ್ಯಾ ಬಾಯಿ ಹೋಳ್ಕರ್”ಇಟಗಿ ಭೀಮಾಂಬಿಕೆ’, ‘ಸಂಗೊಳ್ಳಿ ರಾಯಣ್ಣ’ರಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ‘ಕನ್ನಡಕಥೆಗಾರ್ತಿಯರು’, ‘ತನುಕರಗದವರಲ್ಲಿ’,’ಧರಣಿಯ ಮೇಲೊಂದು’, ‘ಭುವನಕ್ಕೆ ಬೆಲೆಯಿಲ್ಲ’, ‘ಒಳಗೆ ಸತ್ತುಹೊರಗೆ’ಗಳೆಂಬ ವಿಮರ್ಶಾಸಂಕಲನಗಳನ್ನು ಪ್ರಕಟಿಸಿದ್ದಾರೆ.ಹಲವು ಕೃತಿಗಳನ್ನು ಸಂಪಾದಿಸಿದ ಇವರು ಸ್ತ್ರೀನಿಷ್ಠ ವಿಮರ್ಶಕಿಯಾಗಿಯೂ ಪ್ರಸಿದ್ಧರು. ಇವರ ಸಾಧನೆಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿನಿಧಿ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ,ಕಾವ್ಯಾನಂದ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿಯೇ ಮೊದಲಾದಅಸಂಖ್ಯ ಪ್ರಶಸ್ತಿಗಳುಸಂದಿವೆ.

 

ಡಾ. ಷ.ಶೆಟ್ಟರ್-ಬಳ್ಳಾರಿಜಿಲ್ಲೆಯ ಹಡಗಲಿ ತಾಲೂಕಿನ ಹಂಪಸಾಗರದಲ್ಲಿ ಜನಿಸಿದ ಡಾ.ಷ.ಶೆಟ್ಟರ್ ಮೈಸೂರು ವಿಶ್ವವಿದ್ಯಾನಿಲಯದಿಂದಇತಿಹಾಸದಲ್ಲಿಐದುಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಧಾರವಾಡದಕರ್ನಾಟಕ ವಿಶ್ವವಿದ್ಯಾನಿಲಯಮತ್ತುಇಂಗ್ಲೇಂಡಿನಕೇಂಬ್ರಿಡ್ಜ್‌ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಇವರು ಪಡೆದಿದ್ದಾರೆ. ಭಾರತೀಯ ಪುರಾತತ್ತ್ವ, ಕಲೆ-ಇತಿಹಾಸ, ಸಮುದಾಯಗಳ ಇತಿಹಾಸ, ತತ್ತ್ವಶಾಸ್ತ್ರ ಮತ್ತು ಶಾಸ್ತ್ರೀಯ ಭಾಷೆಗಳ ಸಾಹಿತ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ಅಧ್ಯಯನ ನಿರತರು. ಅವರಅವಿರತಅಧ್ಯಯನದ ಫಲವಾಗಿ ಮೈಸೂರುಅರ್ಕಿಯಾಲಜಿ, ಇಂಡಿಯನ್‌ಅರ್ಕಿಯಾಲಜಿ, ಮೋನೋಗ್ರಾಫ್ಸ್‌ಆನ್ ಹಿಸ್ಟರಿಯಾಗ್ರಫಿ, ವರ್ಲ್ಡ್‌ಸಿವಿಲೈಜೇಶನ್, ಇಂಡಿಯನ್‌ಆರ್ಟ್ ಹಿಸ್ಟರಿ, ಫಿಲಾಸಫಿಯೇ ಮೊದಲಾದ ವಿಷಯಗಳಲ್ಲಿ ಅಸಂಖ್ಯಕೃತಿಸಂಪುಟಗಳು ಪ್ರಕಟವಾಗಿವೆ.

ಇತಿಹಾಸ ಮತ್ತು ಸಾಹಿತ್ಯಗಳಲ್ಲಿ ಸಮಾನಆಸಕ್ತಿಯನ್ನು ಹೊಂದಿರುವ ಶೆಟ್ಟರ್‌ಚರಿತ್ರೆ ಮತ್ತು ಸಾಹಿತ್ಯ ಚರಿತ್ರೆಗಳನ್ನು ಮುರಿದುಕಟ್ಟುವ ಕೆಲಸದಲ್ಲಿ ಅವಿಶ್ರಾಂತರಾಗಿ ನಿರತರು.ಭಾಷಾಶಾಸ್ತ್ರ, ಪ್ರಾಚೀನಕನ್ನಡದ ಕ್ಷೇತ್ರಗಳಲ್ಲಿ ಅವರಕೊಡುಗೆಅಪಾರ. ಸಿದ್ಧ ಪಾಶ್ಚಾತ್ಯ ಮಾದರಿಯ ಸಂಶೋಧನಾ ವಿಧಾನಗಳನ್ನು ಬದಿಗಿರಿಸಿಭಾವನಾತ್ಮಕ-ಕಾಲ್ಪನಿಕ ಕಥೆಗಳಲ್ಲಿ ಅಡಕವಾಗಿರಬಹುದಾದಚರಿತ್ರೆಯ ಸಂಗತಿಗಳನ್ನು ಹೆಕ್ಕಿ ತೆಗೆಯುವ ವಿಶಿಷ್ಟ ವಿಧಾನದ ಸಂಶೋಧನೆಅವರದು.  ಪ್ರಾಧ್ಯಾಪಕರಾಗಿ, ಇನ್‌ಸ್ಟಿಟ್ಯೂಟ್ ಆಫ್‌ಇಂಡಿಯನ್‌ಆರ್ಟ್ ಹಿಸ್ಟರಿಯ ನಿರ್ದೇಶಕರಾಗಿ, ಇಂಡಿಯನ್‌ಕೌನ್ಸಿಲ್‌ಆಫ್ ಹಿಸ್ಟಾರಿಕಲ್‌ರಿಸರ್ಚ್, ನವದೆಹಲಿಯಗೌರವಾಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಪ್ರೊ.ಷ.ಶೆಟ್ಟರ್ ಪ್ರಸ್ತುತ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್‌ಎಡ್ವಾನ್ಸ್‌ಡ್ ಸ್ಟಡೀಸ್‌ನಎಮಿರೆಟಸ್ ಫ್ರೊಫೆಸರ್ ಆಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್,ಬೆಂಗಳೂರುಹಾಗೂಇಂದಿರಾಗಾಂಧಿ ನ್ಯಾಶನಲ್ ಸೆಂಟರ್ ಫಾರ್‌ದಆರ್ಟ್ಸ್,ಸೌತ್‌ರೀಜನಿನ ಗೌರವ ನಿರ್ದೇಶಕರಾಗಿದ್ದಾರೆ. ಸಾಹಿತ್ಯಅಕಾಡೆಮಿಯ ಭಾಷಾಭೂಷಣ ಸಮ್ಮಾನ್,ಚಾವುಂಡರಾಯ ಪ್ರಶಸ್ತಿ, ಶಂಭಾ-ಜೋಶಿ ಪ್ರಶಸ್ತಿ, ಲಲಿತಕಲಾ ವಾರ್ಷಿಕ ಪ್ರಶಸ್ತಿ, ಆಚಾರ್ಯಕುಂದಕುಂದ ಪ್ರಶಸ್ತಿಯೇ ಮೊದಲಾದಹಲವಾರುಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದಾರೆ.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.