ಮೂಡುಬಿದಿರೆ: ವಿದ್ಯಾರ್ಥಿಗಳು ದಿನ ನಿತ್ಯದ ಪಠ್ಯ ಚಟುವಟಿಕೆಗಳೊಂದಿಗೆ, ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಯಶಸ್ಸಿನ ಹಾದಿಯನ್ನು ಸುಗಮಗೊಳಿಸಿಕೊಳ್ಳಬೇಕು ಎಂದು ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ವಿಜ್ಞಾನಿ ಪ್ರೋ ಎಂ.ಡಿ ಸುಭಾಷಚಂದ್ರನ್ ತಿಳಿಸಿದರು.
ಅವರು ಶುಕ್ರವಾರ ಸೆಂಟರ್ ಫಾರ್ ಇಕೋಲಾಜಿಕಲ್ ಸೈನ್ಸ್, ಐಐಎಸ್ಸಿ ಬೆಂಗಳೂರು, ಆಳ್ವಾಸ್ ಕಾಲೇಜು, ಆಳ್ವಾಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಮಿಜಾರು, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಇದರ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಜರುಗಿದ ‘’ಲೇಕ್-2016, ಫ್ರೀ ಕಾನ್ಫರೆನ್ಸ್ ವರ್ಕಶಾಫ್- ಇವ್ಯಾಲ್ಯೂವೇಶನ್ ಆಫ್ ರಿಸರ್ಚ ಪೇಪರ್ಸ್’’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಾನವನ ಅನಿಯಂತ್ರಿತ ಹಾಗೂ ಅಜ್ಞಾನದ ಚಟುವಟಿಕೆಗಳಿಂದ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತಿವೆ. ಭೂಮಿಯನ್ನು ತನಗಿಷ್ಟ ಬಂದಂತೆ ಬಳಸಿಕೊಂಡು ಅವಸಾನಗೊಳಿಸುತ್ತಿದ್ದಾನೆ. ಆದ್ದರಿಂದ ತನ್ನ ಜೀವಕ್ಕಿಂತ ತನಗೆ ಬದುಕಲು ಅವಕಾಶ ಮಾಡಿಕೊಟ್ಟ ಪ್ರಕೃತಿಯು ದೊಡ್ಡದು ಎಂಬುದನ್ನು ಮಾನವನು ಮೊದಲು ಅರಿಯಬೇಕು. ಪ್ರಸ್ತುತದಲ್ಲಿ ಮಾನವ ತನ್ನ ನೆರೆಹೊರೆಯವರೊಂದಿಗೆ ನೀರಿಗಾಗಿ ಕಾದಾಡುತ್ತಿದ್ದರೂ, ಪ್ರಕೃತಿ ಮೇಲಿನ ತನ್ನ ಶೋಷಣೆಯೇ ಇದಕ್ಕೆಲ್ಲಾ ಕಾರಣ ಎಂಬುದನ್ನು ಇನ್ನೂ ಅರಿತಿಲ್ಲ ಎಂದರು. ಈ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒದುತ್ತಿರುವ ಯುವ ಮನಸ್ಸುಗಳು ಪ್ರಕೃತಿಯನ್ನು ವೀಕ್ಷಿಸಿ, ಪರೀಕ್ಷಿಸಿ ಸಿದ್ದ ಪಡಿಸಿರುವ ಸಂಶೋಧನಾ ವಿಷಯಗಳು, ವಿದ್ಯಾರ್ಥಿಗಳಲ್ಲಿ ಪ್ರಕೃತಿಯೆಡೆಗಿನ ಸಹಜ ಪ್ರೀತಿಯನ್ನು ಹೆಚ್ಚಿಸುವಂತೆ ಮಾಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಇನ್ನೊರ್ವ ವಿಜ್ಞಾನಿ ಡಾ ಹರೀಶ್ ಭಟ್, ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಂಶೋಧನಾ ವಿಷಯಗಳನ್ನು ಮೌಲ್ಯಮಾಪನ ಮಾಡಿ, ಆದಂತಹ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿ, ಮುಂದಿನ ಹಂತದ ತಯಾರಿಗೆ ಹಲವು ಮಾರ್ಗದರ್ಶನಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಜ್ಞಾನ ಹಾಗೂ ಕಲಿಕಾ ಮನೋಭಾವವನ್ನು ವೃದ್ಧಿಸುವ ಸಲುವಾಗಿ ಮೂಡುಬಿದಿರೆಯ ಆಳ್ವಾಸ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇಂದಿನ ಯುವ ಪೀಳಿಗೆಯೇ ಭವಿಷ್ಯದ ವಿಜ್ಞಾನದ ನಿರ್ಮಾತೃಗಳಾಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 9 ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 51 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂಗ್ಲೀಷ್ ಹಾಗೂ ಕನ್ನಡ ಬಾಷೆಗಳಲ್ಲಿ ಒಟ್ಟು 25 ವಿಷಯಗಳ ಮೇಲೆ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವಿಷಯವನ್ನು ಪಾವರ್ ಪಾೈಂಟ್ ಸಹಾಯದಿಂದ ವಿವರಿಸಿದರು. ‘’ದರೆಗುಡ್ಡೆ ಪರಿಸರದ ಸಸ್ಯವರ್ಗ ಒಂದು ಪರಿಚಯ, ಆನೆಕೆರೆ ಪರಿಸರ, ನಾಗಬನ ಮತ್ತು ಜಲಸಂರಕ್ಷಣೆ, ಇರುವೆಗಳು, ಔಷಧಿ ಸಸ್ಯಗಳು, ಜೀವ ವೈವಿಧ್ಯ ಸೂಚಿಗಳಾಗಿ ಜಿಗಣೆಗಳು, ಹೆಪಾಟೈಟಿಸ್ ರೋಗಕ್ಕೆ ಔಷಧಿ’’ ಮುಂತಾದ ವಿಷಯಗಳನ್ನು ಪ್ರಸ್ತುತ ಪಡಿಸಿದರು.
ಲೇಕ್ -2016ರ ಅಂತಿಮ ಸಮಾವೇಶ ಡಿಸೆಂಬರ 28ರಿಂದ 30ರವರೆಗೆ ಆಳ್ವಾಸ ಕಾಲೇಜಿನಲ್ಲಿ ನೆಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಸಂಶೋಧನಾ ವಿದ್ಯಾರ್ಥಿ ದೀಪ್ತಿ ಹೆಬ್ಬಾಳೆ, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಪ್ರೋ ಕುರಿಯನ್ ಹಾಗೂ ಉಪನ್ಯಾಸಕರಾದ ಡಾ ರಾಜೇಶ್ ಬಿ, ಡಾ ಜಯದೇವ್ ಕೆ ಉಪಸ್ಥಿತರಿದ್ದರು.