ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಕುಸ್ತಿ ಪಂದ್ಯಾಟ ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

 

ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಶ್ರೀ ಗೋಕರ್ಣನಾಥೇಶ್ವರ ಪ.ಪೂ. ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 9 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 9 ವಿಭಾಗದಲ್ಲೂ ಚಿನ್ನದ ಪದಕ ಪಡೆದು ಪ್ರಶಸ್ತಿಯನ್ನು ಪಡೆದಿದ್ದಾರೆ. ಚಂದ್ರಿಕಾ (50ಕೆ.ಜಿ ವಿಭಾಗ), ತನುಜಾ (53ಕೆ.ಜಿ),  ಭಾರತಿ(55 ಕೆ.ಜಿ), ಅಸ್ನಾ (57ಕೆ.ಜಿ), ಡೆಲ್ಫಿ ವರ್ಗೀಸ್( 59 ಕೆ.ಜಿ), ಗಾಯತ್ರಿ( 62ಕೆ.ಜಿ), ವಿನುಶ್ರೀ( 65 ಕೆ.ಜಿ ವಿಭಾಗ), ಅರ್ಚನಾ (68ಕೆ.ಜಿ) ಹಾಗೂ 72 ಕೆ.ಜಿ ವಿಭಾಗದಲ್ಲಿ ಅಕ್ಷತಾ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಒಂಬತ್ತು ಮಂದಿ ವಿದ್ಯಾರ್ಥಿಗಳು ಗದಗದಲ್ಲಿ ನಡೆಯುವ ರಾಜ್ಯಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.