ಆಳ್ವಾಸ್ ನುಡಿಸಿರಿ ೨೦೧೮ ; ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ ಆಯ್ಕೆ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ೧೫ನೇ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ `ಆಳ್ವಾಸ್ ನುಡಿಸಿರಿ’ಯ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌ಘಂಟಿ ಅವರನ್ನು ಮತ್ತು ಉದ್ಘಾಟಕರಾಗಿ ಡಾ.ಷ.ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಾರಿ ‘ಕರ್ನಾಟಕದರ್ಶನ-ಬಹುರೂಪಿ ಆಯಾಮಗಳು’ ಎಂಬ ಪ್ರಧಾನ ಪರಿಕಲ್ಪನೆಯೊಂದಿಗೆ ಆಳ್ವಾಸ್ ನುಡಿಸಿರಿ-೨೦೧೮ ಸಮ್ಮೇಳನವು ನವೆಂಬರ್ ೧೬, ೧೭ ಮತ್ತು ೧೮ರಂದು ಮೂಡುಬಿದಿರೆಯ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಜರುಗಲಿ

ನಾಡು ನುಡಿಯ ಸಮ್ಮೇಳನಕ್ಕೊಂದು ಆಹ್ವಾನ: ಆಳ್ವಾಸ್ ನುಡಿಸಿರಿ ೨೦೧೮ರ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಪ್ರತಿನಿಧಿ ಶುಲ್ಕವಿಲ್ಲದೆ ಸಂಪೂರ್ಣಉಚಿತವಾಗಿ ಭಾಗವಹಿಸಬಹುದು.ಭಾಗವಹಿಸುವ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢೀಕರಣಪತ್ರವನ್ನು ಹೊಂದಿರಬೇಕು.ಇತರರಿಗೆ ಮೂರು ದಿನಗಳ ಊಟ, ವಸತಿಗಳು ಉಚಿತವಾಗಿದ್ದು ರೂ.೧೦೦ ಪ್ರತಿನಿಧಿ ಶುಲ್ಕದೊಂದಿಗೆ ಸಮ್ಮೇಳನವನ್ನು ಕಣ್ತುಂಬಿಸಿಕೊಳ್ಳಬಹುದು.ಖ್ಯಾತ ಸಾಹಿತಿಗಳು, ವಿಮರ್ಶಕರು, ಸಂಶೋಧಕರು, ಕಲಾವಿದರು ಹಾಗೂ ಕನ್ನಡ ಬಾಂಧವರುಒಟ್ಟು ಸೇರುವ ಈ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದರು.

 

ಆಳ್ವಾಸ್ ನುಡಿಸಿರಿಯ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿ.ಆರ್.ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.