ಬಾಹ್ಯಮೂಲಗಳಿಂದ ಪ್ರೇರಣೆ ಪಡೆದುಕೊಂಡರೆ, ಶಿಸ್ತು ಎನ್ನುವುದು ಆಂತರಿಕವಾದುದ್ದು: ವಿವೇಕ್ ಆಳ್ವ

ವಿದ್ಯಾಗಿರಿ: ಮನುಷ್ಯನು ಅಪಾರವಾದ ಸಾಮರ್ಥ್ಯವನ್ನು ಹೊಂದಿದ  ಜೀವ ಸೃಷ್ಠಿಯಾಗಿದ್ದು, ಪ್ರತಿಯೊಬ್ಬರು ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಕಾಲೇನ ವಿ. ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ  ೧೮ನೇ  ಕರ್ನಾಟಕ ಬೆಟಾಲಿಯನ್‌ನ ಕಂಬೈನ್ಡ್ ಆರ್‌ಡಿಸಿ ವಾರ್ಷಿಕ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯಾಂತ್ರಿಕ ಜಗತ್ತಿನಿಂದಾಗಿ ಮಾನವೀಯ ಸಂಬಂಧಗಳು ನಶಿಸಿಹೋಗುತ್ತಿದ್ದು, ಅವುಗಳಿಂದ ಮನಸನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಪ್ರೇರಣೆಯು ಬಾಹ್ಯಮೂಲಗಳಿಂದ ಪಡೆದುಕೊಂಡರೆ ಶಿಸ್ತು ಎನ್ನುವುದು ಆಂತರಿಕವಾದುದು.  ಶಿಸ್ತು ಮತ್ತು ಸಂಯಮವನ್ನು ನಮ್ಮ ಬಾಳಿದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು  ಯಶಸ್ಸನ್ನು ಸಾಧಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ೧೮ನೇ  ಕರ್ನಾಟಕ ಬೆಟಾಲಿಯನ್‌ನ ಆಡಳಿತಾಧಿಕಾರಿ ಮತ್ತು ಡೆಪ್ಯುಟಿ ಕಮಾಂಡೆಂಟ್ ಲೆಫ್ಟಿನೆಂಟ್ ಗ್ರೇಷಿಯಸ್ ಸಿಕ್ವೇರಾ, ನಿಮ್ಮ ಜೀವನವನ್ನು ಅಪ್ರಯೋಜಕ ಕಾರ್‍ಯದಲ್ಲಿ ತೊಡಗಿಸಿಕೊಳ್ಳದೆ, ಸದಾ ಯಶಸ್ಸಿಗೆ ಪೂರಕವಾಗುವ ಕಾಯದಲ್ಲಿ ತೊಡಗಿಸಿಕೊಳ್ಳಿ. ಏಕತೆ ಮತ್ತು ಸಂಯಮಗಳನ್ನು ಬೆಳೆಸಿಕೊಂಡು ಕಠಿಣ ಪರಿಶ್ರಮದಿಂದ ಗುರಿಯನ್ನು ಸಾಧಿಸಬೇಕು ಎಂದರು. ಕಾರ್ಯಕ್ರಮವನ್ನು ಕ್ಯಾಂಪ್ ಅಡ್ಜುಟೆಂಟ್ ಮತ್ತು ಶಿಬಿರಾಧಿಕಾರಿ ಕ್ಯಾಪ್ಟನ್ ಡಾ ರಾಜೇಶ್ ಬಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಮಾಂಡಿಂಗ್ ಅಧಿಕಾರಿ ಕೆಡೆಟ್ ಮನೋಜ್ ವಿ. ಯು, ೧೮ನೇ ಕರ್ನಾಟಕ ಬೆಟಾಲಿಯನ್‌ನ ಸುಬೇದರ್ ಮೇಜರ್ ರಾಜ್ ಗುರುಂಗ್,  ಲೆಫ್ಟಿನೆಂಟ್ ಪ್ರವೀಣ್, ಲೆಫ್ಟಿನೆಂಟ್ ಅಶೋಕ್, ಮುಖ್ಯ ಅಧಿಕಾರಿ ಜಾರ್ಜ್ ಉಪಸ್ಥಿತರಿದ್ದರು.

 

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.