ಆಳ್ವಾಸ್ ವಿದ್ಯಾರ್ಥಿಸಿರಿ 2018 ಸಮ್ಮೇಳನಾಧ್ಯಕ್ಷೆಯಾಗಿ ಸನ್ನಿಧಿ ಟಿ.ರೈ ಪೆರ್ಲ, ಕವಿಗೋಷ್ಠಿ ಅಧ್ಯಕ್ಷೆಯಾಗಿ ಭಾರ್ಗವಿ ಶಬರಾಯ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ  ‘ಆಳ್ವಾಸ್ ವಿದ್ಯಾರ್ಥಿಸಿರಿ 2018’ ವಿದ್ಯಾರ್ಥಿ ಸಾಹಿತ್ಯ – ಸಂಸ್ಕøತಿ ಸಮ್ಮೇಳನದ ಅಧ್ಯಕ್ಷರಾಗಿ ಕಾಸರಗೋಡಿನ ಚಿನ್ಮಯ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಟಿ ರೈ ಪೆರ್ಲ ಆಯ್ಕೆಯಾಗಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷರಾಗಿ ಉಜಿರೆ ಎಸ್‍ಡಿಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭಾರ್ಗವಿ ಶಬರಾಯ ಆಯ್ಕೆಯಾಗಿದ್ದಾರೆ.
ಸಂವಾದ ಗೋಷ್ಠಿಯ ಅಧ್ಯಕ್ಷತೆಗೆ ಉಜಿರೆ ಎಸ್‍ಡಿಎಂ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಾಮ್ ಪ್ರಸಾದ್ ಹಾಗೂ ಸಮಾರೋಪ ಭಾಷಣಕ್ಕೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಅವರನ್ನು ಆಯ್ಕೆ ಮಾಡಲಾಗಿದೆ. ವಿಶೇಷೋಪನ್ಯಾಸ ನೀಡಲು ಬೆಳ್ತಂಗಡಿ ವಾಣಿ ಪದವಿ ಪೂರ್ವಕಾಲೇಜಿನ ಪ್ರಜ್ಞಾ ಪ್ರಭು, ಒಳಕಾಡು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ನಚಿಕೇತ ನಾಯಕ್, ಆಳ್ವಾಸ್ ಪ್ರೌಢಶಾಲೆಯ ಭಾರತೀ ಶಿವಾನಂದ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.ಸಂವಾದ ಗೋಷ್ಠಿಯಲ್ಲಿ ಮೂಡುಬಿದಿರೆ ರೋಟರಿ ಪ್ರೌಢಶಾಲೆಯ ಪ್ರದ್ಯುಮ್ನ ಮೂರ್ತಿ ಕಡಂದಲೆ, ಆಳ್ವಾಸ್ ಪ್ರೌಢಶಾಲೆಯ ಭಕ್ತಿಶ್ರೀ, ಉಜಿರೆಯ ಎಸ್‍ಡಿಎಂ ಪದವಿಪೂರ್ವಕಾಲೇಜಿನ ಪೂರ್ಣಿಮಾ ಹಾಗೂ ಆಳ್ವಾಸ್ ಪಿಯು ಕಾಲೇಜಿನ ಗುಣೇಶ್ ಭಾರತೀಯ ಅವರನ್ನು ಆಯ್ಕೆ ಮಾಡಲಾಹಿದೆ.
ವಿದ್ಯಾಗಿರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ಆಶು ಭಾಷಣ ಹಾಗೂ ಸಂದರ್ಶನ ಹಾಗೂ ಪ್ರಮಾಣ ಪತ್ರ ಪರಿಶೀಲನೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದೆ. ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ, ಡಾ.ಧನಂಜಯ ಕುಂಬ್ಳೆ, ಜೀವನ್‍ರಾಂ ಸುಳ್ಯ, ಶ್ರೀಧರ ಜೈನ್ ಮತ್ತು ರಾಮಕೃಷ್ಣ ಶಿರೂರು ಮೌಲ್ಯ ಮಾಪಕರಾಗಿ ಭಾಗವಹಿಸಿದ್ದರು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.