ಜೈವಿಕ ತಂತ್ರಜ್ಞಾನದ ಮೂಲಕ ಕೃಷಿಬೆಳೆಗಳಲ್ಲಿ ಗುಣ ಪರಿವರ್ತನೆ : ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೋ ಡಾ. ನಟರಾಜ ಕಡಬ

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ವತಿಯಿಂದ “ಜೈವಿಕ ತಂತ್ರಜ್ಞಾನದ ಮೂಲಕ ಕೃಷಿಬೆಳೆಗಳಲ್ಲಿ ಗುಣ ಪರಿವರ್ತನೆ” ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಖ್ಯಾತ ಪ್ರೋ ಡಾ. ನಟರಾಜ ಕಡಬ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಜೈವಿಕ ತಂತ್ರಜ್ಞಾನದಿಂದ ಸಸ್ಯಗಳು ಬಾಷ್ಪ ವಿಸರ್ಜನಾ ಕ್ರಿಯೆಯಿಂದ ಹೊರಹಾಕುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಹಾಗೂ ಇದರಿಂದ ಒಣಭೂಮಿಗಳಲ್ಲಿ ಹೆಚ್ಚು ಆಹಾರ ಉತ್ಪತ್ತಿ ಮಾಡಬಹುದು ಎಂದು ತಿಳಿಸಿದರು.

ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಕುರಿಯನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪಲ್ಲವಿ, ಆನೆಟ್‌ಶ್ರೇಯಾ, ಸಹನಾ ಪ್ರಾರ್ಥಿಸಿದರು.  ವಿಭಾಗದ ಮುಖ್ಯಸ್ಥ ಡಾ. ಪುಪ್ಪೆಂದ್ರ ಸ್ವಾಗತಿಸಿದರು. ಅತಿಥಿಗಳನ್ನು ಡಾ.ಪಿ.ವಿ.ಗೌಡ ಹೂಗುಚ್ಚದೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಕಾವ್ಯಶ್ರೀ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಮೀನಾಕ್ಷಿ ನಿರ್ವಹಿಸಿ, ವಿದ್ಯಾರ್ಥಿನಿ ಪ್ರಣಮ್ಯ ಧನ್ಯವಾದ ಸಮರ್ಪಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.