ಘಟನೆಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮರ ಕಣ್ಣಲ್ಲಿ ಸೆರೆ ಹಿಡಿಯುದರ ಮೂಲಕ ಜನರಿಗೆ ತಲುಪಿಸುತ್ತಾರೆ : ರವಿ ಪೊಸವಣಿಕೆ

ಮೂಡಬಿದಿರೆ:  ಛಾಯಾಗ್ರಹಣ ಪತ್ರಿಕೋದ್ಯಮದ ಒಂದು ಅಂಗವಾಗಿದೆ. ವರದಿಗಾರರು ಘಟನೆಗಳನ್ನು ಬರವಣಿಗೆಯ ಮೂಲಕ ಜನರಿಗೆ ತಲುಪಿಸಿದರೆ ಛಾಯಾಗ್ರಾಹಕರು ತಮ್ಮ ಕ್ಯಾಮರ ಕಣ್ಣಲ್ಲಿ ಸೆರೆ ಹಿಡಿಯುದರ ಮೂಲಕ ನೀಡುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಛಾಯಾಗ್ರಾಹಕ ರವಿ ಪೊಸವಣಿಕೆ ತಿಳಿಸಿದರು.

ಆಳ್ವಾಸ್ ಪದವಿ ಪತ್ರಿಕೋದ್ಯಮ ವಿಭಾಗ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಛಾಯಾಗ್ರಹಣದ ಕುರಿತಾದ ಮಾಹಿತಿ ಕಾರ್‍ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಛಾಯಾಗ್ರಹಣ ಒಂದು ಅದ್ಬುತ ಕಲೆಯಾದ್ದರಿಂದ, ಛಾಯಾಗ್ರಾಹಕರಿಗೆ ಅಗಾಧ ತಾಳ್ಮೆ ಹಾಗೂ ಸಮಯ ಪ್ರಜ್ಞೆಯಿರಬೇಕು ಎಂದರು.  ಕಾರ್‍ಯಕ್ರಮದಲ್ಲಿ ಛಾಯಾಗ್ರಾಹಣದ ವಿವಿಧ ತಂತ್ರಗಳನ್ನು, ಮೊಬೈಲ್ ಪೋಟೋಗ್ರಾಫಿಯ ಕುರಿತು ಮಾಹಿತಿಯನ್ನು  ಪ್ರಾತ್ಯಕ್ಷಿಕೆಯ ಮೂಲಕ ಹಂಚಿಕೊಂಡರು. ಕಾರ್‍ಯಕ್ರಮದಲ್ಲಿ ಪದವಿ ಪತ್ರಿಕೋದ್ಯಮದ ಮುಖ್ಯಸ್ಥೆ ರೇಷ್ಮಾ ಉದಯ್‌ಕುಮಾರ್ ಉಪಸ್ಥಿತರಿದ್ದರು.  ಕಾರ್‍ಯಕ್ರಮವನ್ನು ನಿಕ್ಕಿಚಾನು ನಿರೂಪಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.