ಚಿತ್ರಕಲಾವಿದ ಸೂರ್ಯ ಪ್ರಕಾಶ್‍ಗೆ ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿ

ಮೂಡುಬಿದಿರೆ: 25ನೇ ವರ್ಷದ ಆಳ್ವಾಸ್ ವಿರಾಸತ್‍ಗೆ ಪೂರಕವಾಗಿ ಆಳ್ವಾಸ್ ವರ್ಣವಿರಾಸತ್ ನಡೆಯುತ್ತಿದ್ದು, ಈ ಬಾರಿಯ ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿಯನ್ನು ಸೂರ್ಯ ಹೈದರಾಬಾದಿನ ಹಿರಿಯ ಕಲಾವಿದರಾದ ಸೂರ್ಯ ಪ್ರಕಾಶ್ ಅವರಿಗೆ  ವರ್ಣ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಜನವರಿ 6ರಂದು ಸಾಯಂಕಾಲ 5.45ಕ್ಕೆ ಶ್ರೀಮ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ ವರ್ಣವಿರಾಸತ್ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದರು.
ಸೂರ್ಯ ಪ್ರಕಾಶ್
ಸೂರ್ಯ ಪ್ರಕಾಶ್ ಅವರು ತಮ್ಮ ಮೊದಲನೆ ಏಕ ವ್ಯಕ್ತಿಚಿತ್ರಕಲಾ ಪ್ರದರ್ಶನವನ್ನು 1963ರಲ್ಲಿ, ಹೈದರಬಾದಿನಲ್ಲಿ ನೀಡಿದ್ದು, ಈಗಾಗಲೆ ಸುಮಾರು 50ಕ್ಕಿಂತಲೂ ಅಧಿಕಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಭಾರತ ಮತ್ತುಇತರ ದೇಶಗಳಲ್ಲಿ ನೀಡಿದ್ದಾರೆ.ಇವರ ಹಿಂದಿನ ಚಿತ್ರಕಲಾ ಸರಣಿಯಾದ ‘ಜೊರ್ಗನ್ ಆ¥sóïದ ಜಂಕ್’ಇವರು ನಾಣ್ಣುಡಿಗಳನ್ನೊಳಗೊಂಡು ಮಾಡುತ್ತಿದ್ದ ಪ್ರಯೋಗಗಳನ್ನು ಹಾಗೆಯೇ ದಾರ್ಶನಿಕ ಕñತಿಯನ್ನು ತೀವ್ರಗೊಳಿಸುವ ವಿಧಾನವನ್ನು ತಿಳಿಸುತ್ತದೆ. 60ರ ಇವರ ಕಲಾಕñತಿಗಳು ನವ್ಯತತ್ತ್ವವನ್ನು ಹೊಂದಿದ್ದವು. ಆದರೆ, ಅವರ ಮತ್ತುಅವರು ನಿರಂತರರಚಿಸುತ್ತಿದ್ದ ಚಿತ್ರಕಲೆಗಳ ಬಾಂಧವ್ಯವುಹೆಚ್ಚುತ್ತಿದ್ದಂತೆ, ಜಗತ್ತಿನ ಕೆಲವು ಸುಂದರವಾದ ಅಂಶಗಳನ್ನು ಮತ್ತುಅವರದ್ದೇಆದ ವಿಧಾನವನ್ನುಒಂದುಗೂಡಿಸಿ, ಹೊಸ ವಿಧಾನವನ್ನುರೂಪಿಸಿಕೊಂಡರು.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.