ಮಂಗಳೂರು ವಿ.ವಿ ರ್ಯಾಂಕ್ ಪಟ್ಟಿ ಪ್ರಕಟ ಆಳ್ವಾಸ್‍ಗೆ 20 ರ್ಯಾಂಕ್-ಗರಿಷ್ಠ ರ್ಯಾಂಕ್ ಹೆಗ್ಗಳಿಕೆ

ಮೂಡಬಿದಿರೆ:  ಮಂಗಳೂರು ವಿಶ್ವ ವಿದ್ಯಾಲಯ  ಕಳೆದ  ಎಪ್ರಿಲ್ ತಿಂಗಳಲ್ಲಿ  ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಮೂಡಬಿದಿರೆಯ ಆಳ್ವಾಸ್ ಕಾಲೇಜು ಒಟ್ಟು 20 ರ್ಯಾಂಕ್‍ಗಳನ್ನು ಗಳಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ  ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಳಿಸಿದ  ಒಟ್ಟು 20 ರ್ಯಾಂಕ್‍ಗಳಲ್ಲಿ 5  ಪ್ರಥಮ , 2 ದ್ವಿತೀಯ, 5 ತೃತೀಯ,  ನಾಲ್ಕನೇ ರ್ಯಾಂಕ್ 1, ಆರನೇ ರ್ಯಾಂಕ್ 1, ಎಳನೇ ರ್ಯಾಂಕ್ 3, ಎಂಟನೇ ರ್ಯಾಂಕ್ 1, ಒಂಬತ್ತನೇ ರ್ಯಾಂಕ್ 2 ಗಳಿಸಿದೆ.  ಬಿಬಿಎಂನ ವಂದನಾ (ಶೇ90.36), ಬಿಎಸ್ಸಿ ಎಫ್‍ಆÀ್ಯಂಡ್‍ಡಿಯ ಚಿರಾವಿ ಕೆ (ಶೇ89.20),  ಬಿವಿಎಯ  ಕಾರ್ತಿಕ್ ( ಶೇ 88.09), ಬಿಎಸ್ಸಿ ( ಹೆಚ್ ಎಸ್) ನ ಪಲ್ಲವಿ ರಾವ್ ಹೆಚ್, ಎಂಪಿಎಡ್‍ನ ಮೀನಾಕ್ಷಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು.  ಬಿಎ ಹೆಚ್‍ಆರ್‍ಡಿ ವಿನೀತಾ ರಾವ್ ( ಶೇ 86.82),  ಬಿವಿಎ ಯ ಸಂದೀಪ್ ಆಚಾರ್ ( ಶೇ 87.29 ದ್ವಿತೀಯ ರ್ಯಾಂಕ್‍ಗಳನ್ನು ಗಳಿಸಿದ ವಿದ್ಯಾರ್ಥಿಗಳು. ಬಿಎ ಹೆಚ್‍ಆರ್‍ಡಿ  ಪ್ರೀಮಾ ಶರೀನ್ ಮಸ್ಕರೇನಸ್ ( ಶೇ 85.92), ಬಿಎಸ್ಸಿ ಎಫ್‍ಆÀ್ಯಂಡ್‍ಡಿಯ ದಿವ್ಯಾ ದಾಮೋದರನ್ ( ಶೇ 84.78), ಬಿವಿಎಯ  ಕಿರಣ್ ಸಿ ದಾಮೋದರನ್  (ಶೇ 85.29),  ಬಿಎಸ್‍ಡಬ್ಲ್ಯೂನ  ರಿವೀಂಗ್ ಕಿನ್ಡಟ್ (ಶೇ 81.26), ಬಿಪಿಎಡ್‍ನ ಅಬ್ದುಲ್ ನಾಜೀರ್ ತೃತೀಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳು. ಬಿಬಿಎಂನ  ಸುಜನ್ ಕುಮಾರ್ 4ನೇ ರ್ಯಾಂಕ್ ( ಶೇ 86.92) ಗಳಿಸಿದ್ದರೆ, ಬಿಎಯ  ನಾಗಮಣಿ ಎಸ್  6ನೇ ರ್ಯಾಂಕ್ (ಶೇ 84.62),  ಬಿಬಿಎಂ ನ ವರುಣ್ ರಾಜು ಎಂ (ಶೇ  85.92),  ಬಿಎ ನ  ಕೀರ್ತನಾ ಎಂ (ಶೇ  83.86),  ಬಿಸಿಎನ  ಹೆಚ್ ಎಸ್ ಸ್ಮಿತಾ (ಶೇ 94.16) 7ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳು.  ವಿದ್ಯಾಶ್ರಿ  ಶ್ರೀಪಾಲ್ ಬಡಿಗೇರ್  ಬಿಎಸ್ಸಿ ಯಲ್ಲಿ  8ನೇ ರ್ಯಾಂಕ್ (ಶೇ  95.58), ಹಾಗೂ ಬಿಎಯ  ಮಾನಸ ಎಂ ( ಶೇ 83.60) ಮತ್ತು  ಬಿಕಾಂನ ರೇನಿಶಾ ಡಿಸೋಜಾ ( ಶೇ 93.54) 9ನೇ ರ್ಯಾಂಕ್‍ನ್ನು ಗಳಿಸಿದ ವಿದ್ಯಾರ್ಥಿಗಳು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
]

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.