ರಾಷ್ಟ್ರಮಟ್ಟದ ಅಂತರ್ ವಿ.ವಿ ಯುವಜನೋತ್ಸವ ಆಳ್ವಾಸ್‍ನ ಏಕಾಂಕ ನಾಟಕ, ಜಾನಪದ ನೃತ್ಯಕ್ಕೆ ಪ್ರಶಸ್ತಿ

ಮೂಡುಬಿದಿರೆ: ಚಂಡಿಗಡ್ ವಿಶ್ವವಿದ್ಯಾಲಯ ಮತ್ತು ಆಲ್ ಇಂಡಿಯಾ ವಿಶ್ವವಿದ್ಯಾಲಯ ಆಶ್ರಯದಲ್ಲಿ ಫೆ.1ರಿಂದ 5ವರೆಗೆ ನಡೆದ 34ನೇ ರಾಷ್ಟ್ರಮಟ್ಟದ ಅಂತರ್ ವಿ.ವಿ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಏಕಾಂಕ ನಾಟಕ ಧೂತ ವಾಕ್ಯ ದ್ವಿತೀಯ, ಜಾನಪದ ನೃತ್ಯ ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ 10ನೇ ಬಾರಿ ಪ್ರಶಸ್ತಿ ಗಳಿಸಿ ಆಳ್ವಾಸ್ ದಾಖಲೆ ನಿರ್ಮಿಸಿದೆ.
ತಂಡದಲ್ಲಿರುವ 26 ಮಂದಿ ವಿದ್ಯಾರ್ಥಿಗಳು ಕೂಡ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರು ತರಬೇತುದಾರರನ್ನು ಹಾಗೂ ಪ್ರೋತ್ಸಾಹಿಸಿದ  ಮಂಗಳೂರು ವಿ.ವಿ ಕಲುಪತಿ, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಏಕಾಂಕ ನಾಟಕವನ್ನು ಖ್ಯಾತ ರಂಗಕರ್ಮಿ ಜೀವನರಾಮ ಸುಳ್ಯ ನಿರ್ದೇಶಿಸಿದ್ದಾರೆ.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.