ತರಬೇತುದಾರರಾದ ಆಳ್ವಾಸ್ ವಿಕಿಪೀಡಿಯ ಅಸೋಸಿಯೇಶನ್ ವಿದ್ಯಾರ್ಥಿಗಳು

ಮೂಡುಬಿದಿರೆ: ಕನ್ನಡ ವಿಕಿಪೀಡಿಯದಲ್ಲಿ ಕಳೆದ ಒಂದೂವರೆ ವರುಷದಿಂದ ನಿರಂತರ ಲೇಖನಗಳನ್ನು ನೀಡುತ್ತಾ ಬಂದಿರುವ, ‘ಆಳ್ವಾಸ್ ವಿಕಿಪೀಡಿಯ ಅಸೋಸಿಯೇಶನ್’ ಇತ್ತೀಚೆಗೆ ಕಾಲೇಜಿನ ಹೊರಗೂ ಕರ್ನಾಟಕದಾದ್ಯಂತ ತನ್ನ ಸೊಗಡನ್ನು ಪರಿಚಯಿಸುತ್ತಿದೆ. ಕನ್ನಡ ವಿಕಿಪೀಡಿಯದಲ್ಲಿ ಅತ್ಯಂತ ಕ್ಷಿಪ್ರವಾಗಿ ಬೆಳೆದು ತಮ್ಮನ್ನು ತಾವು ತರಬೇತುದಾರರಾಗಿ ರೂಪಿಸಿಕೊಂಡಿರುವುದು ‘ಆಳ್ವಾಸ್ ವಿಕಿಪೀಡಿಯ ಅಸೋಸಿಯೇಶನ್’ ವಿದ್ಯಾರ್ಥಿಗಳ ಸಾಧನೆಗೊಂದು ನಿದರ್ಶನ.

 

ದಿ. 9 ಫೆಬ್ರವರಿ 2019 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ‘ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ’ಯ ಸಮಾವೇಶದಲ್ಲಿ ಪ್ರಬಂಧ ಮಂಡನೆ ಮಾಡುತ್ತಿರುವ ಕು. ದುರ್ಗಾಪ್ರಸನ್ನ

ದಿ. 10 ಫೆಬ್ರವರಿ 2019 ರಂದು ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದಲ್ಲಿ ತರಬೇತಿ ನೀಡಿದ ಕು. ದೀಕ್ಷಾ, ಕು. ಯಕ್ಷಿತ, ಮತ್ತು ಕು. ಸ್ವಾತಿ

 

ದಿ. 19 20  ಜನವರಿ 2019  ರಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ತರಬೇತಿ ನೀಡಿದ ಶ್ರೀ. ಪ್ರಣವ್ ಎಸ್. ಮತ್ತು ಕು. ದುರ್ಗಾಪ್ರಸನ್ನ


 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.