Environment and Wildlife Protection Awareness Program

ವಿದ್ಯಾಗಿರಿ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುತ್ತಿದ್ದು, ಇದರಿಂದಾಗಿ ಅರಣ್ಯ ಸಂಪನ್ಮೂಲಗಳು ನಶಿಸುತ್ತಿವೆ. ಆದ್ದರಿಂದ ದೇಶದ ಮುಂದಿನ ಭವಿಷ್ಯ ಎಂದು ಪರಿಗಣಿಸಲ್ಪಟ್ಟ ವಿದ್ಯಾರ್ಥಿಗಳು ಅರಣ್ಯ ಸಂರಕ್ಷಿಸುವಲ್ಲಿ ಶ್ರಮ ವಹಿಸಬೇಕು ಎಂದು ಶೃಂಗೇರಿ ಜೆ.ಸಿ.ಬಿ.ಎಮ್ ಕಾಲೇಜಿನ ಉಪನ್ಯಾಸಕರಾದ ರಾಘವೇಂದ್ರ ಹೇಳಿದರು.

ಇವರು ಆಳ್ವಾಸ್ ಹೋಮಿಯೋಪತಿ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರ ಅರಣ್ಯ ಇಲಾಖೆ, ಕುದುರೆಮುಖ ವನ್ಯಜೀವಿ ವಿಭಾU,À ಕಾರ್ಕಳ ವನ್ಯಜೀವಿ ವಲಯದವತಿಯಿಂದ ನಡೆದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಣ್ಯ ಸಂರಕ್ಷಣೆ ಎಂಬುದು ಅರಣ್ಯ ಇಲಾಖೆಗಳಿಗೆ ಸೀಮಿತವಾಗಿರದೇ ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯು ಮಹತ್ವದ ಕಾರ್ಯವಾಗಿದ್ದು, ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಕೈ ಜೋಡಿಸಬೇಕು. ಆಗ ಮಾತ್ರ ಮುಂದಿನ ಜನಾಂಗಕ್ಕೆ ಆರೋಗ್ಯಯುತ ವಾತಾವರಣವನ್ನು ನೀಡಲು ಸಾಧ್ಯ ಎಂದರು.

450 ಕೋಟಿ ವರ್ಷಗಳ ಇತಿಹಾಸವಿರುವ ಈ ಭೂಮಿಯನ್ನು ಕೇವಲ ಎರಡು ಲಕ್ಷ ವರ್ಷಗಳ ಹಿಂದೆ ಉಗಮಿಸಿದ ಮನುಷ್ಯ ಆಳುತ್ತಿರುವುದು ವಿಪರ್ಯದ ಸಂಗತಿ. ಪ್ರಾಣಿಗಳ ವಾಸಸ್ಥಾನವಾಗಿರುವ ಅರಣ್ಯವನ್ನು ನಾಶಮಾಡಿ ಮನುಷ್ಯ ತನ್ನ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಮಾನವರಿಂದ ಅರಣ್ಯ ಹಾಗೂ ವನ್ಯ ಜೀವಿಗಳ ಮೇಲೆ ದಾಳಿ ಆಗುತ್ತಿದೆಯೇ ಹೊರತು ವನ್ಯಜೀವಿಗಳಿಂದ ಏನು ಹಾನಿ ಉಂಟಾಗಿಲ್ಲ ಎಂದರು.
ಕಾರ್ಕಳ ವಲಯದ ಅರಣ್ಯ ಅಧಿಕಾರಿ ಸಂತೋಷ್ ಸಾಗರ್ ಮಾತನಾಡಿ, ಪ್ರತಿಯೊಂದು ಇಲಾಖೆಯು ತನ್ನದೇ ಚೌಕಟ್ಟಿನಲ್ಲಿ ಕಾರ್ಯ ಮಾಡುತ್ತಾರೆ. ಆದರೆ ಅರಣ್ಯ ಇಲಾಖೆಯೊಂದೇ ಯಾವುದೇ ಪರಿಮಿತಿಯನ್ನು ಗಣನೆಗೆ ತೆಗೆದುಕೊಳ್ಳದೇ ಅರಣ್ಯದ ಪ್ರತಿಯೊಂದು ಜೀವಿಯನ್ನು ಸಂರಕ್ಷಿಸುವ ಜವಬ್ದಾರಿಯನ್ನು ಹೊಂದಿದ್ದಾರೆ. ಮನುಷ್ಯನ ಸ್ವಾರ್ಥದಿಂದ ನೈಸರ್ಗಿಕವಗಿ ದೊರೆಯುವ ಸಂಪನ್ಮೂಲಗಳನ್ನು ಇಂದು ಹಣಕೊಟ್ಟು ಪಡೆದುಕೊಳ್ಳವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ಸಂಪತ್ತನ್ನು ಉಳಿಸುವಲ್ಲಿ ಪ್ರತಿಯೊಬ್ಬರೂ ಶ್ರಮವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹೋಮಿಯೋಪತಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.