ಮಂಗಳೂರು ವಿ.ವಿ ವಿ.ವಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್‍ಗೆ ಫ್ಯಾಬಿಯನ್ ಕುಲಾಸೋ ಪರ್ಯಾಯ ಫಲಕ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು ಬ್ಯಾಡ್ಮಿಂಟನ್ ತಂಡವು ಕಾರ್ಕಳದ ಭುವನೇಂದ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸತತ 15ನೇ ಬಾರಿಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಫೈನಲ್ ಪಂದ್ಯಾಟದಲ್ಲಿ ಅತಿಥೇಯ ಭುವನೇಂದ್ರ ತಂಡವನ್ನು 35-15 ಹಾಗೂ 25-8 ನೇರ ಸೆಟ್‍ಗಳಿಂದ ಸೋಲಿಸಿ ಫ್ಯಾಬಿಯನ್ ಕುಲಾಸೋ ಪರ್ಯಾಯ ಫಲಕವನ್ನು ಪಡೆಯಿತು. ಸೆಮಿಫೈಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಬಂಟ್ವಾಳ ಎಸ್‍ವಿಎಸ್ ಕಾಲೇಜು ತಂಡವನ್ನು ಹಾಗೂ ಭುವನೇಂದ್ರ ಕಾಲೇಜು ತಂಡವು ಉಜಿರೆ ಎಸ್‍ಡಿಎಂ ತಂಡಗಳನ್ನು ನೇರ ಸೆಟ್‍ಗಳಿಂದ ಸೋಲಿಸಿ ಫೈನಲ್ ತಲುಪಿತು. ಆಳ್ವಾಸ್ ತಂಡದ ಜಯಲಕ್ಷ್ಮೀ ಉತ್ತಮ ಹೊಡೆತಗಾರ್ತಿ, ಮೇಘನಾ ರಕ್ಷಣಾ ಆಟಗಾರ್ತಿ ಹಾಗೂ ಭುವನೇಂದ್ರ ಕಾಲೇಜಿನ ವಿದ್ಯಾ ಸರ್ವಾಂಗೀಣ ಆಟಗಾರ್ತಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.

 

 

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.