ಆಳ್ವಾಸ್ ಕಾಪ್ರ್ರೋವ 2018 ಮೆನೇಜ್‍ಮೆಂಟ್ ಫೆಸ್ಟ್

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮೆನೇಜ್‍ಮೆಂಟ್ ವಿಭಾಗದ ವತಿಯಿಂದ `ಕಾಪ್ರ್ರೋವ 2018’ ಅಂತರ್ ತರಗತಿ ಮೆನೇಜ್‍ಮೆಂಟ್ ಫೆಸ್ಟ್’ ಅನ್ನು ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಯಿತು.
ಇನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸ್ಥಾಪಕ ಅಶ್ವತ್ ಹೆಗ್ಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಮೆನೇಜ್‍ಮೆಂಟ್ ಎಂದರೆ ತಮ್ಮನ್ನು ತಾವು ಅವಲೋಕಿಸುವುದು ಎಂದರ್ಥ. ನಮ್ಮಲ್ಲಿರುವ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳನ್ನು ಅವಲೋಕಿಸಿದಾಗ ಯಶಸ್ಸು ಸಾಧು. ನಮ್ಮದೇ ಆದ ಸಾಮಥ್ರ್ಯವನ್ನು ಸ್ಥಾಪಿಸಬಹುದು. ಆ ಸಾಮಥ್ರ್ಯದ ರೂಪವೇ ಕಂಪನಿ.  ಪ್ರಾರಂಭಿಕ ಹಂತದಲ್ಲಿ ನಾವು ಅನುಭವಿಸುವ ಕಷ್ಟ, ನೋವುಗಳು ಮುಂದೊಂದು ದಿನ ಸಮಾಜದಲ್ಲಿ ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ತಮ್ಮನ್ನು ಅವಲೋಕಿಸಿ ಮುನ್ನಡೆಯುವುದು ಉತ್ತಮ ಎಂದರು.
2014-2017 ಸಾಲಿನ ಕಲಿತ ಹಳೇ ವಿದ್ಯಾರ್ಥಿಗಳು ಎಲ್‍ಸಿಡಿ ಪ್ರಾಜೆಕ್ಟರ್ ಅನ್ನು ಕೊಡುಗೆಯಾಗಿ  ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿವೇಕ್ ಆಳ್ವ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ವಿಭಾಗದ ಮುಖ್ಯಸ್ಥೆ ಸುರೇಖಾ, ಕಾರ್ಯಕ್ರಮದ ಸಂಯೋಜಕರಾದ ರಕ್ಷಿತಾ, ಕೆ.ಬಿ ಮಹಾಲೆ, ವಿದ್ಯಾರ್ಥಿ ಸಂಯೋಜಕರಾದ, ಸೌರವ್ ಶೆಟ್ಟಿ, ಸಂದೀಪ್ ಜಿ. ಉಪಸ್ಥಿತರಿದ್ದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.