Faculty development program

ವಿದ್ಯಾಗಿರಿ: ಮಾ.02 : ಜೀವನದಲ್ಲಿ ವಿಶ್ವಾಸ ತುಂಬಾ ಮುಖ್ಯ. ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ನಟ-ನಿರ್ದೇಶಕ ಎಮ್. ಜಿ. ಶ್ರೀನಿವಾಸ್ ಹೇಳಿದರು.
ಇವರು ಆಳ್ವಾಸ್ ಕಾಲೇಜಿನಲ್ಲಿ ಬಿ.ಕಾಮ್ ವಿಭಾಗವು ಆಯೋಜಿಸಿದ್ದ ಅಂತರ್ ವಿಭಾಗ ಫೆಸ್ಟ್ ‘AURA’ನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇವರು, ನಮಗೆ ಎಲ್ಲಾ ವಿಷಯಗಳಲ್ಲೂ ಸ್ಪಷ್ಟತೆ ಇರಬೇಕು ಯಾವುದೇ ವಿಷಯದಲ್ಲೂ ಗೊಂದಲ ಇರಬಾರದು. ಸೋಲು ಎನ್ನುವುದು ಎಲ್ಲರ ಜೀವನದಲ್ಲೂ ಸಾಮಾನ್ಯ, ಅದರ ಬಗ್ಗೆ ಭಯ ಬೇಡ. ಜೀವನದಲ್ಲಿ ಸೋಲು ಬಂದೇ ಬರುತ್ತದೆ ಅದನ್ನು ಎದುರಿಸಲು ನಾವು ಯಾವಾಗಲೂ ಮಾನಸಿಕವಾಗಿ ತಯಾರಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವು ತರಗತಿಯಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ನಮಗೆ ಏನೂ ಅರ್ಥವಾಗುವುದಿಲ್ಲ. ನಮ್ಮ ಸಾಮಥ್ರ್ಯವನ್ನು ನಾವು ಅರಿತಾಗ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ನಮ್ಮನ್ನು ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ನಮ್ಮ ಕೈಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ವಥ್ ಹೆಗ್ಡೆ, ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರೊ. ಕೆ. ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿ.ಕಾಮ್ ವಿದ್ಯಾರ್ಥಿ ಚರಿತ್ರಾ ಭಂಡಾರಿ ನಿರೂಪಿಸಿದರು. ಪ್ರತೀಕ್ಷಾ ಶೆಟ್ಟಿ ಸ್ವಾಗತಿಸಿದರು ಹಾಗೂ ಪ್ರಿಯಾಂಕ ವಂದಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.