ಕನ್ನಡ ಡಿಂಡಿಮ ವಿಚಾರ ಸಂಕಿರಣ

ಮೂಡಬಿದಿರೆ: ಮಕ್ಕಳ ನಿರ್ಲಕ್ಷ್ಯದಿಂದ ಅನಾಥಶ್ರಮ ಸೇರುತ್ತಿರುವ ತಂದೆ ತಾಯಿಯ ಪರಸ್ಥಿತಿಯೆ ಇಂದು ಕನ್ನಡ ಭಾಷೆಗೂ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಆಳ್ವಾಸ್ ಕನ್ನಡ ಸಂಸ್ಕ್ರತಿ ಅಧ್ಯಯನ ಕೇಂದ್ರ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಡಿಂಡಿಮ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಇಂಗ್ಲೀಷ್ ಭಾಷೆ ಮುಖ್ಯ ಆದರೆ ಕನ್ನಡ ಭಾಷೆವನ್ನು ಮರೆಯಬಾರದು. ಶಾಲೆಗಳಲ್ಲಿ ಮಾತ್ರವಲ್ಲ ಹೆತ್ತವರು ಕೂಡ ಬಾಲ್ಯದಿಂದಲೇ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ ಒಂದು ಭಾಷೆ ಮನುಷ್ಯರ ನಡುವೆ ಸಂಬಂಧವನ್ನು ಬೆಸೆಯುವ ಸಾಧನಾ. ಮನುಷ್ಯ ಅರ್ಥಪೂರ್ಣವಾಗಿ ಬದುಕಬೇಕಾದರೆ ಭಾಷೆಯನ್ನು ಉಳಿಸಿ ರಕ್ಷಿಸಬೇಕು. ಆದರೆ ಇಂದು ಅಧಿಕಾರ ಹಣ ಆಯುಧಗಳು ಭಾಷೆಯ ಜೊತೆಗೆ ಸೇರಿ ಪ್ರಪಂಚವನ್ನು ಸಂಸ್ಕøತಿಯನ್ನು ಆಳುತ್ತಿರುವುದು ಅಪಾಯಕಾರಿ ಎಂದರು.

ವರ್ತಮಾನದಲ್ಲಿ ಕನ್ನಡದ ಸ್ಥಿತಿಗತಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಕಾರ್ಕಳ ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಪಕ ಡಾ.ವರದರಾಜ್ ಚಂದ್ರಗಿರಿ, ಇಂದು ಕನ್ನಡದ ಅಸ್ತಿತ್ವಗಿಂತ ಅಸ್ಮಿತೆ ಸವಾಲಾಗಿದೆ. ವಿವಿಧ ಕಾಲಘಟ್ಟದಲ್ಲಿ ಕನ್ನಡವನ್ನು ಪೊರೆಯುವ ಕೆಲಸವನ್ನು ವಿವಿಧ ಸಂಸ್ಥೆಗಳು ಮಾಡುತ್ತಾ ಬಂದಿವೆ. ಧರ್ಮ , ರಾಜಪ್ರಭುತ್ವ ಒಂದು ಕಾಲದಲ್ಲಿ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸಿದರೆ, ಇಂದು ಜಗತ್ತಿನ ಎಲ್ಲಾ ವಿದ್ಯಾಮಾನಗಳನ್ನು ಆರ್ಥಿಕತೆಯೆ ನಿಯಂತ್ರಿಸುತ್ತಿದೆ. ಎಲ್ಲವನ್ನು ಲಾಭದ ದೃಷ್ಟಿಕೋನದಿಂದ ನೋಡುವ ಹಿನ್ನಲೆಯಿಂದ ಕನ್ನಡ ಸೊರಗಿದೆ. ಇಂತಹ ಸವಾಲಗಳನ್ನು ಕನ್ನಡ ಮೀರಿ ಸಾಗಬೇಕಿದೆ ಎಂದರು.
ಪವಿತ್ರಾ ಕೋಟ್ಯಾನ್ – ಕರ್ನಾಟಕ ಸಾಂಸ್ಕøತಿಕ ವೈಭವ, ಆದರ್ಶ ಕೆಲ- ಸಾಹಿತ್ಯಲೋಕದಲ್ಲೊಂದು ಕಥಾ ಹಂದರ, ರೂಪಾ ಬಾಬು ಶೆಟ್ಟಿ- ಆಧುನಿಕತೆಯ ಕನ್ನಡ ನಾಟಕ ಸಾಹಿತ್ಯ, ಪ್ರಕಾಶ್ ಬಳಗನೂರು- ಜ್ಞಾನಪೀಠಪುರಸ್ಕøತರಿಂದ ಸಾಹಿತ್ಯಲೋಕಕ್ಕೆ ಕೊಡುಗೆ, ರಕ್ಷಾಚಂದ್ರ- ಕನ್ನಡ ಕಾವ್ಯ ಎಂಬ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಮತ್ತು ಹುಲಿಕಡ್ಜಳ ಎಂಬ ಸಣ್ಣಕಥೆ ಬರೆದು ರಾಜ್ಯ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಆಳ್ವಾಸ್ ಕಾಲೇಜಿನ ಅಧ್ಯಾಪಕ ಪ್ರೊ.ಹರೀಶ್ ಟಿ.ಜಿ ಅವರನ್ನು ಸನ್ಮಾನಿಸಲಾಯಿತು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.