ಸಂಯೋಜಿತ ಯೋಜನೆಗಳಿಂದ ಆತ್ಮಹತ್ಯೆ ತಡೆ ಸಾಧ್ಯ: ಡಾ. ರಮೀಲಾ ಶೇಖರ್

ಮೂಡುಬಿದಿರೆ: ತಂತ್ರಜ್ಞಾನಗಳು ಬೆಳೆದಂತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣಗಳು ದೇಹದ ಅಸ್ವಸ್ಥತೆಗೆ ಕಾರಣವಾಗುವುದು ಮಾತ್ರವಲ್ಲದೆ ಮಾನಸಿಕ ಘರ್ಷಣೆಗಳಿಗೂ ಕಾರಣವಾಗಿದೆ. ನಕಾರಾತ್ಮಕ ಅಲೋಚನೆಗಳು ಭಾವನೆಗಳನ್ನು ಹಂಚಿಕೊಳ್ಳದಂತೆ ತಡೆಹಿಡಿಯುತ್ತವೆ. ಇದರ ಪರಿಣಾಮ ಆತ್ಮಹತ್ಯೆಯ ಚಿಂತನೆಗಳು ಮೂಡುತ್ತವೆ. ಜನರೇಶನ್ ಗ್ಯಾಪ್ ಎನ್ನುವುದು ಸಮರ್ಥವಾದದಲ್ಲ, ನಮ್ಮಲ್ಲಿರುವ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ಕಮ್ಯುನಿಕೇಶನ್ ಗ್ಯಾಪ್‍ನ್ನು ದೂರ ಮಾಡಬೇಕೆಂದು ಮಾನಸಿಕ ಸಲಹೆಗಾರರಾದ ಡಾ. ರಮೀಲಾ ಶೇಖರ್ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದ ವತಿಯಿಂದ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಬದಲಾವಣೆ ಹಾಗೂ ಅವಿಭಕ್ತ ಕುಟುಂಬಗಳ ನಶಿಸುವಿಕೆಯಿಂದ ಮಕ್ಕಳಿಗೆ ಮಾನಸಿಕ ಅರೈಕೆ ಮತ್ತು ಬೆಂಬಲ ಇಲ್ಲದಾಗಿದೆ. ಇಂತಹ ಅಸಹಾಯಕತೆ ಆತ್ಮಹತ್ಯೆಯ ಯೋಚನೆಗಳನ್ನು ಬೆಳೆಸುತ್ತದೆ. ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಜೀವನ ಕೌಶಲ್ಯಗಳನ್ನು ವೃದ್ಧಿಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಸಂಯೋಜಿತ ಕಾರ್ಯಗಳಿಂದ ಆತ್ಮಹತ್ಯೆಯ ತಡೆ ಸಾಧ್ಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಎದುರಿಸುವ ಕೌಶಲ್ಯ ಕುಂಠಿತಗೊಳ್ಳುತ್ತಿದೆ. ಸೋಲನ್ನು ಅರಗಿಸಿಕೊಳ್ಳಲು ಆಗದೇ ಇದ್ದಾಗ ಅತೀ ಕಿರಿಯ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಹೇಗೆ ದೇಹದ ಅನಾರೋಗ್ಯದ ಕುರಿತು ಚರ್ಚಿಸಲು ಹಿಂಜರಿಕೆ ಇಲ್ಲವೂ ಹಾಗೆಯೆ ಮಾನಸಿಕ ಬದಲಾವಣೆಯ ಕುರಿತು ಸಲಹೆ ಪಡೆಯುವಾಗ ಮುಜುಗರ ಮಾಡಬಾರದು. ಜನರು ಮಾನಸಿಕ ಆರೋಗ್ಯ ದಿನದ ಮಹತ್ವವನ್ನು ಅರಿತುಕೊಳ್ಳುವುದರೊಂದಿಗೆ ಪೂರಕವಾದ ಕೆಲಸಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸ್ನಾತಕೋತ್ತರ ಮನೋವಿಜಾÐನ ವಿಭಾಗದ ಸಂಯೋಜಕಿ ಡಾ. ಆಡ್ರಿ ಪಿಂಟೋ, ಪದವಿ ಮನೋವಿಜಾÐನ ವಿಭಾಗದ ಮುಖ್ಯಸ್ಥೆ ಜೋಸ್ವಿಟ ಡೇಸ, ಉಪನ್ಯಾಸಕಿ ರೋಸಮ್ಮ ಉಪಸ್ಥಿತರಿದ್ದರು. ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಮನೋವಿಜ್ಞಾನ ಸಂಘ ಯುನೋಯದ ಸದಸ್ಯರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮನೋವಿಜ್ಞಾನ ಸಂಘದ ಅಧ್ಯಕ್ಷ ಪ್ರಣವ್ ಶಿವಕುಮಾರ್ ಸ್ವಾಗತಿಸಿದರು, ಸಾತಕೋತ್ತರ ಮನೋವಿಜ್ಞಾನ ಸಂಘದ ಅಧ್ಯಕ್ಷೆ ಸಾರಾ ವಂದಿಸಿದರು.

ಈ ಬಾರಿಯ ವಿಶೇಷತೆಗಳು:
“ಆತ್ಮಹತ್ಯೆ ತಡೆಗಟ್ಟುವಿಕೆಯೆಡೆಗೆ ಸಂಯೋಜಿತ ನಡೆ” ಎಂಬ ಪರಿಕಲ್ಪನೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
ವ್ಯಕ್ತಿತ್ವ ಸಂಬಂಧಿತ ಪರೀಕ್ಷೆಗಳು
ಚಾಲೆಂಜ್ ಬೂತ್
ಡೆಮೋ ಟೆಸ್ಟ್
ಭಿತ್ತಿಪತ್ರ ಪ್ರದರ್ಶನ


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.