ಕೆ.ಎಸ್.ಇ.ಎ ಅಂತರ್ ಕಾಲೇಜು ಕ್ರಿಕೆಟ್: ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಅಂತರ್ ಕಾಲೇಜು ಹಾರ್ಡ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ ತಂಡ ತಮ್ಮ ನಿಗದಿತ 50 ಓವರ್‍ಗಳಲ್ಲಿ 93 ರನ್‍ಗಳಿಗೆ ತನ್ನ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು. ಆಳ್ವಾಸ್ ತಂಡವು 4 ವಿಕೆಟ್ ನಷ್ಟಕ್ಕೆ 93 ರನ್‍ಗಳ ಗುರಿಯನ್ನು 18 ಓವರ್‍ಗಳಲ್ಲಿ ಗಳಿಸಿತು. ಆಳ್ವಾಸ್ ಪರವಾಗಿ ಅಭಿಲಾಷ್ ಶೆಟ್ಟಿ 34 ರನ್, ರಾಹುಲ್ 28 ರನ್‍ಗಳನ್ನು ಗಳಿಸಿದರು. ಬೌಲಿಂಗ್ ವಿಭಾಗದಲ್ಲಿ ಯಶ್ವಿತ್ 3 ವಿಕೆಟ್, ಚಿರಾಂತ್ 3 ವಿಕೆಟ್ ಹಾಗೂ ಮನೋಜ್ 2 ವಿಕೆಟ್‍ಗಳನ್ನು ಪಡೆದರು.