ಆಳ್ವಾಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಕಾಲೇಜಿನ ‘’ರೀಡರ್ಸ್ ಕ್ಲಬ್’’ ವತಿಯಿಂದ ‘’ವೈ, ವೇರ್, ವೆನ್, ವಾಟ್, ಹೌ ಆಫ್ ನ್ಯೂಸ್ ಪೇಪರ್’’ ಎಂಬ ವಿಷಯದ ಮೇಲೆ ‘’ಅಭಿವಿನ್ಯಾಸ’’ ಕಾರ್ಯಕ್ರಮವನ್ನು ಶನಿವಾರ, ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಪ್ರೀಸಂ ಸಾಪ್ಟ್ಯಕ್‍ನ ನಿರ್ದೇಶಕ ಡಾ ರಘು ಎ ರಾವ್ ಮಾತನಾಡಿದರು. ‘’ಅತ್ಯಂತ ಕಡಿಮೆ ಖರ್ಚಿನಲ್ಲಿ, ಹೆಚ್ಚಿನ ವಿಷಯವನ್ನು ಒದಗಿಸುವ ಸಾಧನವೆಂದರೆ ಪತ್ರಿಕೆಗಳು. ದಿನ ಪತ್ರಿಕೆಗಳು ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಒದುಗರಿಗೆ ಸಕಾಲಕ್ಕೆ ನೀಡಿ, ಜ್ಞಾನದ ದೀವಿಗೆ ಹೆಚ್ಚಿಸುವ ಜೀವಂತ ಪಠ್ಯಗಳಾಗಿವೆ ಎಂದು ನುಡಿದರು. ಇವು ನಮ್ಮ ವಿಷಯ ಜ್ಞಾನವನ್ನು ಹೆಚ್ಚಿಸುವುದಲ್ಲದೇ, ಪದಸಂಪತ್ತು, ವೈಚಾರಿಕ ಚಿಂತನೆ, ಸೃಜನಾತ್ಮಕತೆ, ಬರಹದ ಶುದ್ದಿ ಹಾಗೂ ಓದುವ ಹವ್ಯಾಸವನ್ನು ಒರೆಗೆ ಹಚ್ಚುತ್ತವೆ ಎಂದು ಹೇಳಿದರು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಹಿನ್ನಲೆಯಲ್ಲಿ, ಪ್ರತಿಯೊಬ್ಬರು ಪತ್ರಕರ್ತನ ಸೂಕ್ಷ್ಮಮತಿ ಗುಣವನ್ನು ಹಾಗೂ ಬರಹದ ಶೈಲಿಯನ್ನು ಆಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ಏರ್ಪಡಿಸಿ, ಅವರ ಹಲವು ಸಂಶಯಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ‘’ದಿ ಹಿಂದೂ’’ ಪತ್ರಿಕೆಯ ಅಸಿಸ್ಟೆಂಟ್ ರೀಜನಲ್ ಮ್ಯಾನೇಜರ್ ಎಂ ಜೆ ಮ್ಯಾಥ್ಯೂ, ಎಐಇಟಿ ಎಂಬಿಎ ನಿಖಾಯದ ಡೀನ್ ಪ್ರೋ ಪಿ ರಾಮಕೃಷ್ಣ ಚಡಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸನಲ್ ಪ್ರಾರ್ಥಿಸಿ, ಕುಸುಮಾಶ್ರೀ ಸ್ವಾಗತಿಸಿ, ನಿರೂಪಿಸಿದರು.