ಆಳ್ವಾಸ್ ಛಾಯಾಚಿತ್ರಸಿರಿ 2018-ಫಲಿತಾಂಶ ಪ್ರಕಟ

ಮೂಡುಬಿದಿರೆ: ಆಳ್ವಾಸ್ ಛಾಯಾಚಿತ್ರಸಿರಿ 201ರ ಅಂಗವಾಗಿ ಫೆಡರೇಶನ್ ಆಫ್ ಇಂಡಿಯನ್ ಫೆÇೀಟೋಗ್ರಾಫಿ ಅವರ ಮಾರ್ಗದರ್ಶನದಲ್ಲಿ  ಜರುಗಿದ ರಾಷ್ಟ್ರ ಮಟ್ಟದ ಛಾಯಾಚಿತ ಸ್ಪರ್ಧೆಗೆ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 750 ಕ್ಕೂ ಅಧಿಕ ಛಾಯಾಚಿತ್ರಗಾರರು ಭಾಗವಹಿಸಿ 4500 ದಾಖಲೆಯ ಚಿತ್ರಗಳನ್ನು ಕಳುಹಿಸಿದ್ದಾರೆ.
ಕಲರಫುಲ್ಲ್ ಇಂಡಿಯಾ,ರೂರಲ್ ಲೈಫ್ ವೈಲ್ಡ್ ಲೈಫ್ ಹಾಗೂ ಮೊನೋಕ್ರೋಮ್ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ನಗದು ಅನುಕ್ರಮವಾಗಿ ರೂ. 7,500, ರೂ. 5,000 ಹಾಗೂ ರೂ. 3,000  ಹಾಗೂಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.
ಕಲರ್ಫುಲ್ ಇಂಡಿಯಾ ವಿಭಾಗಳಲ್ಲಿ ಬೆಂಗಳೂರಿನ ಶರತ್ ಆಚಾರ್ಯ(ಪ್ರಥಮ), ಉತ್ತರ ಪ್ರದೇಶದ ಅನುಪಮ್ ಗುಹಾ(ದ್ವಿತೀಯ), ಕೋಲ್ಕತ್ತದ ದೀಪಕ್ ಶಾ(ತೃತೀಯ) ಬಹುಮಾನ ಪಡೆದಿದ್ದಾರೆ. ರೂರಲ್ ಲೈಫ್ ವಿಭಾಗದಲ್ಲಿ ಕೋಲ್ಕೊತ್ತದ ಅನುಪಮ್ ರಾಯ್ ಚೌದರಿ(ಪ್ರ), ಮುಂಬೈಯ ದೀಪಕ್ ಬಾರಾಟ(ದ್ವಿ), ಕಾಕಿನಾಡದ ತುಮ್ಮಾಲಪಲ್ಲಿ ವೀರಭದ್ರ ರಾವ್(ತೃ) ಬಹುಮಾನ ಪಡೆದಿದ್ದಾರೆ. ವೈಲ್ಡ್ ಲೈಫ್ ವಿಭಾಗದಲ್ಲಿ ಬೆಂಗಳೂರಿನ ಯಶವಂತ್ ಎಲ್ (ಪ್ರ), ಕದರಮಂಡಲಗಿಯ ಶಶಿಧರಸ್ವಾಮಿ ಹಿರೇಮಠ(ದ್ವಿ), ಗುವಾಹತಿಯ ಅಶೋಕ್‍ಕುಮಾರ್ ದಾಸ್(ತೃ) ಬಹುಮಾನ ಪಡೆದಿದ್ದಾರೆ. ಮೊನೋಕ್ರೋಮ್ ವಿಭಾಗದಲ್ಲಿ ಚಂಡೀಗಡದ ವಿನೋದ್ ಚೌಹಾಣ್(ಪ್ರ), ಬೆಂಗಳೂರಿನ ವರದ ನಾಯಕ (ದ್ವಿ), ಕೋಲ್ಕತ್ತದ ಶಿಬಾಶಿಶ್ ಸಹಾ(ತೃ) ಬಹುಮಾನ ಪಡೆದಿದ್ದಾರೆ.
ಬೆಂಗಳೂರಿನ ಬಿ. ಶ್ರೀನಿವಾಸ್, ಸಿ.ಆರ್. ಸತ್ಯನಾರಾಯಣ, ಯಜ್ಞ ಮಂಗಳೂರು ಹಾಗೂ ಜಿನೇಶ್ ಪ್ರಸಾದ್ ತೀರ್ಪುಗಾರರರಾಗಿದ್ದರು. ಅ. 25ರಂದು ಉಡುಪಿಯಲ್ಲಿ ಚಿತ್ರಗಳ ಆಯ್ಕೆ ಜರುಗಿತು. ಈ ನಾಲ್ಕು ವಿಭಾಗದಲ್ಲಿ ವಿಜೇತರ ಮತ್ತು ಸ್ವೀಕೃತಿ ಪಡೆದ ಚಿತ್ರಗಳ ಪ್ರದರ್ಶನವು ನ. 13 ರಂದು ಆಳ್ವಾಸ್ ಕ್ಯಾಂಪಸ್‍ನಲ್ಲಿ ಆರಂಭವಾಗಲಿದೆ. ಅದೇ ದಿನ ಬಹುಮಾನ ವಿತರಣೆಯೂ ಜರಗಲಿದೆ ಎಂದು ಆಳ್ವಾಸ್ ಶಿಕ್ಷಣ ಪತಿಷ್ಠಾನದ ಅಧ್ಯಕ್ಷ  ಡಾ.ಮೋಹನ್ ಆಳ್ವ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.