ಆಹಾರ ವಿಜ್ಞಾನ: ಫೆ.8, 9ರಂದು ಆಳ್ವಾಸ್‍ನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೆÇೀಷಣೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳ ಆಶ್ರಯದಲ್ಲಿ  ಫೆ.8 ಮತ್ತು 9ರಂದು `ಆಹಾರ ಭದ್ರತೆ: ಕಾರ್ಯವಿಧಾನಗಳು, ಪೆÇೀಷಕಾಂಶಗಳು-ಅಗತ್ಯ, ಪ್ರಸ್ತುತತೆ, ಸವಾಲುಗಳು ಹಾಗೂ ಆಯಾಮಗಳು’ ಕುರಿತಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಂiÀಲಿದೆ ಎಂದು ಸಂಕಿರಣದ ಮುಖ್ಯ ಸಂಯೋಜಕಿ,  ಆಳ್ವಾಸ್ ಆಹಾರ ವಿಜ್ಞಾನ ಮತ್ತು ಪೆÇೀಷಣೆ ವಿಭಾಗ ಮುಖ್ಯಸ್ಥೆ  ಡಾ.ಅರ್ಚನಾ ಪ್ರಭಾತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಘಾಟನ ಸಮಾರಂಭದಲ್ಲಿ ಶ್ರೀಲಂಕಾದ ಅಮರ್ ರಾಜ್ ಸಿಂಗ್ ಆಶಯ ಭಾಷಣ ಮಾಡಲಿದ್ದಾರೆ.
ಡಾ. ಎಂ. ಮೋಹನ ಆಳ್ವರು ಅಧ್ಯಕ್ಷತೆ ವಹಿಸಲಿದ್ದು ಮಂಗಳೂರು ವಿ.ವಿ. ವೈಸ್ ಚಾನ್ಸೆಲರ್ ಪೆÇ್ರ. ಈಶ್ವರ ಪಿ., ಜಿ.ಪಂ. ಸಿಇಒ ಡಾ.ಸೆಲ್ವಮಣಿ, ಆಳ್ವಾಸ್‍ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಕುರಿಯನ್ ಭಾಗವಹಿಸಲಿದ್ದಾರೆ. ಶನಿವಾರ ಮಧ್ಯಾಹ್ನ ಗಂ. 12ಕ್ಕೆ ಉದ್ಯಮಿ ರಾಹುಲ್ ಕಾಮತ್ ಕೆದಿಂಜೆ ಸಮಾರೋಪ ಭಾಷಣ ಮಾಡಲಿದ್ದು  ಮಂ.ವಿ.ವಿ. ಕುಲಸಚಿವ ಡಾ. ಎ. ಎಂ. ಖಾನ್, ಆಳ್ವಾಸ್ ಟ್ರಸ್ಟಿ ವಿವೇಕ ಆಳ್ವ  ಭಾಗವಹಿಸಲಿದ್ದಾರೆ.  ಎಂದು ಅವರು ತಿಳಿಸಿದರು.
ಫೆ.8ರಂದು ಥಾಯ್ಲೆಂಡ್‍ನ ಡಾ.ಸೂಟ್ಟಾವಟ್ ಬೆಂಜಕುಲ್ (ಸಾಗರೋತ್ಪನ್ನ ಸಂಸ್ಕರಣೆಯಲ್ಲಿ ಉಷ್ಣರಹಿತ ತಾಂತ್ರಿಕತೆ), ತಮಿಳ್ನಾಡು ಪೆರಿಯಾರ್ ವಿ.ವಿ.ಯ ಪೆÇ್ರ. ಡಾ. ಪಿ. ನಝ್ನಿ  (ಆರೋಗ್ಯದಾಯಕ ಸಿರಿಧಾನ್ಯಗಳು), ಬಾಂಗ್ಲಾ ದೇಶದ ಆಹಾರ ಸಂರಕ್ಷಣ ಪ್ರಾಧಿಕಾರದ ಸದಸ್ಯ ಪೆÇ್ರ. ಡಾ.ಇಕ್ಬಾಲ್ ರವೂಫ್ ಮಾಮುನ್ (ಬಾಂಗ್ಲಾದೇಶದಲ್ಲಿ ಆಹಾರ ಸಂರಕ್ಷಣೆಗಾಗಿರುವ  ಕಾನೂನುಗಳು, ಗುಣಮಟ್ಟ ಮಾಪನಗಳು), ಕೋಡೆಕ್ಸ್ ಇಂಡಿಯಾದ ಅಧ್ಯಕ್ಷ ಸಂಜಯ್ ದವೆ (ಆಹಾರ ಉದ್ಯಮ ಪ್ರವರ್ಧನೆಯಲ್ಲಿ ಭಾರತೀಯ ಆಹಾರ ನಿಬಂಧನೆಗಳು), ಹಿಮಾಲಯ ಡ್ರಗ್ ಕಂಪೆನಿಯ ಪೂರ್ಣಿಮಾ ಶಂಕರ್ (ನ್ಯೂಟ್ರಾಸ್ಯೂಟಿಕಲ್ಸ್‍ನಲ್ಲಿ ಸಿಹಿ-ಇತ್ತೀಚಿನ ಬೆಳವಣಿಗೆಗಳು), ಫೆ.9ರಂದು ಶ್ರೀಲಂಕಾದ ಪೆÇೀಷಕಾಂಶ ತಜ್ಞೆ ನಿಲುಷಿ ಮುದಲಿಗೆ (ಅಸುರಕ್ಷಿತ ಆಹಾರ-ರೋಗಗಳಿಗೆ ಚಾಲಕ), ಮುಂಬಯಿಯ ಇಂಟೆಗ್ರೇಟೆಡ್ ಫುಡ್ ಪಾರ್ಕ್‍ನ ಸಿಇಓ ಸಂಜಯ್ ಮುಲ್ಪಾನಿ (ಭಾರತದಲ್ಲಿ ಆಹಾರ ಬಳಕೆ ಮತ್ತು  ಸಂಸ್ಕರಣೆಯಲ್ಲಿ ಮಾದರಿ ಬದಲಾವಣೆಗಳು) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿರುವರು.
ಸಮಿತಿ ಸದಸ್ಯರಾದ ಆಶಿತಾ ಎಂ.ಡಿ. ಮತ್ತು ಡಾ.ನವೀನ್ ಕುಮಾರ್ ವಿ. ಉಪಸ್ಥಿತರಿದ್ದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.