‘ಕೆರಿಯರ್ ಗುರು ಅಫ್ ಮಂತ್’

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯೋಗ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ಸುಶಾಂತ್ ಅನಿಲ್ ಲೋಬೋ ಇವರು ವಿದ್ಯಾರ್ಥಿಗಳಲ್ಲಿ ಉದ್ಯೋಗ ಶೀಲತೆಯ ದಕ್ಷತೆಯನ್ನು ಉತ್ತೇಜಿಸುವುದರೊಂದಿಗೆ ಉದ್ಯೋಗವಕಾಶಕ್ಕೆ ಪೂರಕವಾದ ವಾತವರಣವನ್ನು  ನಿರ್ಮಿಸಿ , ಹೆಚ್ಚಿನ ಸಂಖ್ಯೆಯಲ್ಲಿ  ಇಂಜಿನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳನ್ನು ಉದ್ಯೋಗಾರ್ಹರನ್ನಾಗಿ ಮಾಡಲು ಪಟ್ಟ ನಿಸ್ವಾರ್ಥ ಶ್ರಮವನ್ನು ಪರಿಗಣಿಸಿ, ಭಾರತದ ಹೆಸರಾಂತ ಉದ್ಯೋಗ ಸಮೀಕ್ಷಾ ಸಂಸ್ಥೆಯಾದ ಆಸ್ಪಿರಿಂಗ್ ಮೈಂಡ್ಸ್ `ಕೆರಿಯರ್ ಗುರು ಅಫ್ ಮಂತ್’ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

2017-18 ರ  ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ತಾಂತ್ರಿಕ ವಿದ್ಯಾಲಯವು ಸುಮಾರು 530 ವಿದ್ಯಾರ್ಥಿಗಳನ್ನು ಉದ್ಯೋಗವಕಾಶಕ್ಕೆ ನೋಂದಾಯಿಸಿದ್ದು, ಈಗಾಗಲೇ ಶೇಕಡಾ ೮೦ರಷ್ಟು ಅರ್ಹ ವಿದ್ಯಾರ್ಥಿಗಳು ವಿವಿಧ ವಿಭಾಗದಿಂದ ಕಂಪನಿಗಳಿಗೆ ನೇಮಕಾತಿ ಹೊಂದಿದ್ದಾರೆ.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.