ಜಿಲ್ಲಾ ವೇಯ್ಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

]

ಮೂಡುಬಿದಿರೆ: ದ.ಕ ಜಿಲ್ಲಾ ವೇಯ್ಟ್‍ಲಿಫ್ಟರ್ ಅಸೋಶಿಯೇಶನ್ ವತಿಯಿಂದ ಮಂಗಳೂರಿನ ಡಾನ್‍ಬಾಸ್ಕೊ ಸಭಾಂಗಣದಲ್ಲಿ ಜರುಗಿದ ದ.ಕ ಜಿಲ್ಲಾಮಟ್ಟದ ಚಾಂಪಿಯನ್‍ಶಿಪ್‍ನಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮಹಿಳಾ ಹಾಗೂ ಪುರುಷರ ವಿಭಾಗದ ತಂಡದ ಪ್ರಶಸ್ತಿ ಪಡೆಯುವುದರೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಮಹಿಳಾ ವಿಭಾಗದ ದ್ವಿತೀಯ ತಂಡ ಪ್ರಶಸ್ತಿಯನ್ನು ಐರನ್ ಡೆನ್ ಮಂಗಳೂರು ಹಾಗೂ ಪುರುಷರ ವಿಭಾಗದಲ್ಲಿ ಎಸ್‍ಡಿಎಂ ಉಜಿರೆ ಕಾಲೇಜು ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ವೇಯ್ಟ್‍ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ನಾಗೇಶ್ ಕುಮಾರ್, ಉಪಾಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಜಾನ್ ರೆಬೆಲ್ಲೊ, ಶೆಟ್ಟಿ, ಮಾಜಿ ಮೇಯರ್ ಪುರಂದರದಾಸ್ ಕೂಳೂರು ಉಪಸ್ಥಿತರಿದ್ದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.