ವಿದ್ಯಾಗಿರಿ: ಯಾವುದೇ ಕೆಲಸವನ್ನು ಮಾಡುವ ಮೊದಲು ಯೋಜನೆ ಅತ್ಯವಶ್ಯಕ. ಯೋಜನೆಯ ಜೊತೆಗೆ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಮಾರ್ಗವನ್ನು ತಿಳಿದಿರಬೇಕೆಂದು ಮಂಗಳೂರಿನ ಪ್ರಾಕ್ಟಿಸಿಂಗ್ ಚಾರ್ಟೆಡ್ ಅಕೌಟೆಂಟ್ ಯಶಸ್ವಿನಿ ಕೆ. ಅಮೀನ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಿಕಾಮ್ ಹೆಚ್‍ಆರ್‍ಡಿ ಪದವಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದು “ಪ್ರಾಕ್ಟಿಕಲ್ ಆಡಿಟಿಂಗ್ ಆ್ಯಂಡ್ ಜಿಎಸ್‍ಟಿ” ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಆಡಿಟ್ ಎನ್ನುವುದು ಸಂಪೂರ್ಣ ಯೋಜನೆಯಾಗಿದ್ದು, ಪ್ರತಿಯೊಂದು ಹಂತದಲ್ಲಿಯೂ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಅಡಿಟ್‍ನ ಮೂಲ ಗುರಿಯೆಂದರೆ ಫೈನಾಶಿಯಲ್ ಸ್ಟೆಂಟ್ಮೆಂಟ್‍ನ ಅಭಿಪ್ರಾಯವನ್ನು ಪಡೆದುಕೊಳ್ಳುವುದು. ಪ್ರತಿಯೊಂದು ಕಂಪನಿಯಲ್ಲೂ ತಿಂಗಳಿಗೊಮ್ಮೆ ಆಡಿಟಿಂಗ್ ಮಾಡಲಾಗುವುದು. ಈ ಸಮಯದಲ್ಲಿ ಆಡಿಟಿರ್, ಕಂಪೆನಿಯ ಸಂಪೂರ್ಣ ಖರ್ಚು ವೆಚ್ಚಗಳ ಬಗ್ಗೆ ತಿಳಿದುಕೊಂಡಿರಬೇಕು.
ಆಡಿಟಿಂಗ್‍ಗಾಗಿ ಬಳಸುವ ಕಂಪೆನಿಗೆ ಸಂಬಂಧ ಪಟ್ಟ ದಾಖಲೆಗಳನ್ನು ರಹಸ್ಯವಾಗಿಡಬೇಕು. ನಿಮ್ಮ ಪ್ರತಿಯೊಂದು ಆಡಿಟಿಂಗ್ ವರದಿಗಳು ಕಂಪನಿಯ ಮಾಲೀಕರಿಗೆ ಸರಿಯಾಗಿ ಸಲ್ಲಿಸಬೇಕು ಇಲ್ಲವಾದಲ್ಲಿ ಕೆಲವೊಮ್ಮೆ ಸವಾಲುಗಳನ್ನು ಎದುರಿಸಬೇಕಾದಿತು” ಎಂದರು.
“ಅಡಿಟಿಂಗ್ ಮಾಡುವಾಗ ನಿಮ್ಮಲ್ಲಿ ವಿಶ್ವಾಸಾರ್ಹತೆ, ವಾಸ್ತವಿಕತೆ, ಸಮಗ್ರತೆಯ ಕೌಶಲ್ಯವಿರಬೇಕು. ಪ್ರತಿಯೊಂದು ಆಡಿಟಿಂಗ್ ವರದಿಗೆ ಸಂಬಂಧ ಪಟ್ಟಂತೆ ನಿಮ್ಮ ಬಳಿ ಪೂರಕ ಮಾಹಿತಿ ಇರಬೇಕು. ಯಾವುದೇ ಕಾರಣಕ್ಕೂ ಗೊಂದಲಕ್ಕೆ ದಾರಿ ಮಾಡಕೊಡಬಾರದು. ಆಡಿಟಿಂಗ್ ಮಾಡುವ ಮೊದಲು ಕಂಪೆನಿಯ ಬಗ್ಗೆ ಅಧ್ಯಯನ ಹಾಗೂ ಪೂರ್ವ ಯೋಜನೆ ಮಾಡುವುದು ಒಳಿತು. ನಿಮ್ಮ ಮೇಲೆ ಕಂಪೆನಿಯ ಸಾಕಷ್ಟು ಹೊಣೆಗಾರಿಕೆಗಳಿದ್ದು, ಎಲ್ಲಿಯೂ ತಪ್ಪಾಗದಂತೆ ಜಾಗೃತಿವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಸುರೇಖಾ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮಹಿಮಾ, ಸಂಗೀತಾ ಉಪಸ್ಥಿತಿರಿದ್ದರು. ವಿದ್ಯಾರ್ಥಿನಿ ಭಾವನ ಸ್ವಾಗತಿಸಿ, ಗಗನ್ ವಂದಿಸಿ, ಕ್ರಿಸ್ ಡಿಸೋಜಾ ನಿರೂಪಿಸಿದರು.