ಫೆಡರೇಶನ್‌ಕಪ್‌ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ : ಕರ್ನಾಟಕ ಹ್ಯಾಟ್ರಿಕ್‌ಚಾಂಪಿಯನ್

ತಮಿಳುನಾಡಿನ ದಿಂಡಿಗಲ್‌ನಲ್ಲಿ ನಿನ್ನೆ ಮುಕ್ತಾಯಗೊಂಡ ೬ನೇ ಫೆಡರೇಶನ್‌ಕಪ್‌ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಹ್ಯಾಟ್ರಿಕ್ ಚಾಂಪಿಯನ್‌ಶಿಪ್‌ನ ಸಾಧನೆ ಮಾಡಿದೆ. ಭಾರತಿಯ ಬಾಲ್ ಬ್ಯಾಡ್ಮಿಂಟನ್ ಫೆಡರೇಶನ್ ಹಾಗೂ ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ವತಿಯಿಂದ ದಿಂಡಿಗಲ್‌ನ ಪಿ.ಎಸ್.ಎನ್.ಎ. ಕಾಲೇಜಿನಆವರಣದಲ್ಲಿಜರುಗಿದ ಈ ಚಾಂಪಿಯನ್‌ಶಿಪ್‌ನ ಫೈನಲ್ಸ್‌ನಲ್ಲಿರಾಜ್ಯ ವನಿತೆಯರುಅತಿಥೇಯ ತಮಿಳುನಾಡು ತಂಡವನ್ನು ೩೨-೩೫, ೩೫-೩೦ ಹಾಗೂ ೩೫-೨೬ ಅಂಕಗಳ ರೋಚಕ ಹೋರಾಟದಲ್ಲಿ ಮಣಿಸಿ ೬ನೇ ಫೆಡರೇಶನ್‌ಕಪ್ ಪ್ರಶಸ್ತಿಗೆ ಭಾಜನರಾದರು. ನಾಲ್ಕರಘಟ್ಟದ ಪಂದ್ಯಗಳಲ್ಲಿ ರಾಜ್ಯತಂಡ ಬಿಹಾರ ವಿರುದ್ಧ ೩೫-೧೮ ಹಾಗೂ ೩೫-೨೩ ಅಂಕಗಳಿಂದ ಹಾಗೂ ತಮಿಳುನಾಡು ಆಂದ್ರಪ್ರದೇಶದ ವಿರುದ್ಧ ೩೫-೨೧ ಹಾಗೂ ೩೫-೨೬ ಅಂಕಗಳಿಂದ ಸೋಲಿಸಿ ಫ್ಯೆನಲ್‌ಗೆಅರ್ಹತೆ ಪಡೆದಿತ್ತು.ರಾಜ್ಯತಂಡದ ನಾಯಕಿ ಜಿ. ಜಯಲಕ್ಷೀಟೂರ್ನಿಯಅತ್ಯುತ್ತಮಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು. ರಾಜ್ಯ ಪುರುಷರತಂಡ ನಾಲ್ಕನೇ ಸ್ಥಾನ ಪಡೆಯಿತು.

ದಕ್ಷಿಣ ವಲಯದಲ್ಲಿರಾಜ್ಯಕ್ಕೆಅಗ್ರಸ್ಥಾನ

ಫೆಡರೇಶನ್‌ಕಪ್‌ನ ಮುಂಚಿತವಾಗಿ ನಡೆದಿದ್ದ ೪೨ನೇ ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲೂ ತಮಿಳುನಾಡು ತಂಡವನ್ನು ಮಣಿಸಿ ರಾಜ್ಯತಂಡ ಹ್ಯಾಟ್ರಿಕ್ ಚಾಂಪಿಯನ್‌ಶಿಪ್‌ಗೆ ಅರ್ಹತೆಯನ್ನು ಪಡೆಯಿತು.ದಕ್ಷಿಣ ವಲಯದಲ್ಲಿರಾಜ್ಯ ಪುರುಷರತಂಡತೃತೀಯ ಸ್ಥಾನದ ಸಾಧನೆ ಮಾಡಿದೆ.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.