ಫ್ರಮ್ ಚೆಂಜ್ ಟೊ ಟ್ರಾನ್ಸ್ಫಾಾರ್ಮೆಷನ್ ಒಂದು ದಿನದ ಕಾರ್ಯಾಗಾರ

ವಿದ್ಯಾಗಿರಿ: ನಾವು ಖುಷಿಯನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳಬೇಕು. ನಾವು ಸಂತೋಷದಿಂದ ಇರೋದರ ಜೊತೆಗೆ ಇನ್ನೊಬ್ಬರನ್ನೂ ಖುಷಿಯಾಗಿ ಇಡುವಂತೆ ನೋಡಿಕೊಳ್ಳಬೇಕು. ಜೊತೆಗೆ ಜೀವನದಲ್ಲಿ ಮನುಷ್ಯತ್ತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿಯ ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಜೈಕಿಷನ್ ಭಟ್ ಮಾತನಾಡಿದರು.

ಅವರು ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ನಡೆದ ಫ್ರಮ್ ಚೆಂಜ್ ಟೊ ಟ್ರಾನ್ಸ್‍ಫಾರ್ಮೆಷನ್ ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಾಣಿಜ್ಯ ವಿಭಾಗದ ಡೀನ್ ಉಮೇಶ್ ಶೆಟ್ಟಿ ಮಾತನಾಡಿ, ನಾವು ಸ್ವತಂತ್ರರಾಗಿದ್ದರೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಜೀವನದ ಅಭ್ಯುದಯಕ್ಕೆ ಅನೇಕ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮಿತ್ರಾ ಬಿ. ಡಿ ಹಾಗೂ ಶೈಕ್ಷಣಿಕ ಸಲಹೆಗಾರ್ತಿ ಭವ್ಯಾ ಉಪಸ್ಥಿತರಿದ್ದರು. ಪ್ರಿಯಾಂಕ ಎಮ್. ನಾಯಕ್ ಸ್ವಾಗತಿಸಿ, ವರ್ಷಿತಾ. ಕೆ ವಂದಿಸಿ, ಸಾಕ್ಷಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.