ಮಂಗಳೂರು ವಿ.ವಿ. ಕ್ರೀಡಾಕೂಟಕ್ಕೆ ಚಾಲನೆ

ಮೂಡುಬಿದಿರೆ: ಮಂಗಳೂರು ವಿ.ವಿ. ಮತ್ತು ಆಳ್ವಾಸ್ ಕಾಲೇಜು ಇವುಗಳ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ  ಮಂಗಳವಾರ ಪ್ರಾರಂಭವಾದ ಮಂಗಳೂರು ವಿ.ವಿ. 38ನೇ ಅಂತರ್ ಕಾಲೇಜು  ಮತ್ತು ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಆಥ್ಲೆಟಿಕ್ಸ್ ಕೂಟಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಭಯಚಂದ್ರ  ಜೈನ್, ಮಂಗಳೂರು ವಿ.ವಿ. ವೈಸ್ ಛಾನ್ಸೆಲರ್ (ಆ್ಯಕ್ಟಿಂಗ್) ಡಾ.ಕಿಶೋರ್ ಕುಮಾರ್ ಸಿ.ಕೆ. ಧ್ವಜಾರೋಣಗೈದರು ಹಾಗೂ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನದ ಗೌರವರಕ್ಷೆ ಸ್ವೀಕರಿಸಿದರು.
ಮಂ.ವಿ.ವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ  ವೇಣುಗೋಪಾಲ ನೋಂಡ, ಜಿಲ್ಲಾ  ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾಕೂಟದ ಸಂಯೋಜಕ, ಮಂಗಳೂರು ಸೈಂಟ್ ಆಗ್ನೆಸ್ ಸ್ಪೆಶಲ್ ಸ್ಕೂಲ್‍ನ ದೈಹಿಕ ಶಿಕ್ಷಣ ನಿರ್ದೇಶಕ ನಾರಾಯಣ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳು, ಆಳ್ವಾಸ್‍ನ ವಿದ್ಯಾರ್ಥಿನಿ ಅಭಿನಯ ಶೆಟ್ಟಿ  ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆಳ್ವಾಸ್‍ನ ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳಾದ ಸುಪ್ರಿಯಾ, ಚೈತ್ರಾ, ಅನಿಲ್, ಪ್ರಜ್ವಲ್ ಮಂದಣ್ಣ  ಕ್ರೀಡಾಜ್ಯೋತಿಯನ್ನು ಬೆಳಗಿದರು.
ವಿ.ವಿ. ಕೂಟಗಳಲ್ಲಿ ಹೊಸ ದಾಖಲೆ ಮಾಡುವ ಕ್ರೀಡಾಳುಗಳಿಗೆ ರೂ. 2,000 ನಗದು ನೀಡುವ ಆಳ್ವಾಸ್ ಪರಂಪರೆಯಂತೆ ಕೂಟದ ಪ್ರಾರಂಭದಲ್ಲೇ ಹೊಸ ದಾಖಲೆ ಮಾಡಿರುವ ಆಳ್ವಾಸ್‍ನ ಮನೋಜ್ (20 ಕಿ.ಮೀ. ನಡಿಗೆ) ಮತ್ತು ಭಗತ್ ಶೀತಲ್ (3000 ಮೀ. ಸ್ಟೀಪಲ್ ಚೇಸ್) ಅವರಿಗೆ ತಲಾ ರೂ. 2,000 ನೀಡಲಾಯಿತು.
ಅಜ್ಜರಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.