ಮೂಡುಬಿದಿರೆ: ಎನ್.ಸಿ.ಸಿ. ತರಬೇತಿಯಲ್ಲಿ ಕಲಿತ ಶಿಸ್ತಿನ ಪಾಠಗಳಾದ ಗುರು ಹಿರಿಯರಿಗೆ ಗೌರವ ಕೊಡುವುದು, ಸಹಪಾಠಿಗಳೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸುವುದು ಮುಂದೆ ನಮ್ಮನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಡು ಹೋಗುತ್ತದೆ ಎಂದು ಕ್ಯಾಂಪ್ ಕಮಾಂಡೆಂಟ್ ಕರ್ನಲ್ ಮನೋಜ್ ವಿ.ಯು ಹೇಳಿದರು.
ವಿದ್ಯಾಗಿರಿಯ ಡಾ. ವಿ. ಎಸ್. ಆಚಾರ್ಯ ಸಭಾಭವನದಲ್ಲಿ ನಡೆದ ಆಳ್ವಾಸ ಕಾಲೇಜಿನ ಎನ್.ಸಿ.ಸಿ. ವಿಭಾಗದಿಂದ ಆಯೋಜಿಸಲಾದ 18 ಕರ್ನಾಟಕ ಬಿಎನ್ ಎನ್.ಸಿ.ಸಿ. ಮಂಗಳೂರು, ಇದರ ಹತ್ತು ದಿನಗಳ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಈ ತರಬೇತಿ ಮುಂದಿನ ಹಂತದಲ್ಲಿ ಎನ್‍ಸಿಸಿಯಲ್ಲಿ ನಡೆಯುವ ಎ, ಬಿ ಮತ್ತು ಸಿ ಸರ್ಟಿಫಿಕೇಟ್‍ಗಳ ಪರೀಕ್ಷೆಗೆ ಸಹಕಾರಿಯಾಗಿದ್ದು, ಅಲ್ಲದೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪಾಲ್ಗೊಳ್ಳುವ ಕೆಡೆಟ್‍ಗಳ ಆಯ್ಕೆಗೆ ಸಹಕಾರಿಯಾಗಿದೆ.
ಒಬ್ಬ ವ್ಯಕ್ತಿಯ ಸ್ವಭಾವ ಅವನ ನಡೆ ನುಡಿಯಲ್ಲಿ ಪ್ರತಿಬಿಂಬಿಸುತ್ತದೆ. ಇಂತಹ ತರಬೇತಿಗಳು ಶಿಸ್ತು, ಏಕತೆ ಹಾಗೂ ಗೌರವ ಕೊಡುವುದನ್ನು ಕಲಿಸಿಕೊಡುತ್ತವೆ ಎಂದು ಲೆಪ್ಟಿನೆಂಟ್ ಕರ್ನಲ್ ಗ್ರೆಸಿಯಾನ್ ಸಿಕ್ವೇರ ಹೇಳಿದರು.
ಕೆಡೆಟ್‍ಗಳಿಗೆ ಸಮಾರಂಭದಲ್ಲಿ ಪ್ರಶಸ್ತಿ ಪಧಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಡಾ. ರಾಜೇಶ್, ಲೆಫ್ಟಿನೆಂಟ್ ಚೀಫ್ ಆಫಿಸರ್ ತಾವ್ರೋ, ಲೆಫ್ಟಿನೆಂಟ್ ಪ್ರವೀಣ, ಲೆಫ್ಟಿನೆಂಟ್ ಶಕೀನ್ ರಾಜ್, ಲೆಫ್ಟಿನೆಂಟ್ ರಾಜೇಶ್ ಶೆಟ್ಟಿಗಾರ್, ಎಸ್.ಎಮ್ ರಾಜಗುರುಂ, ಲೆಫ್ಟಿನೆಂಟ್ ಬೀನಾ, ಸೆಕೆಂಡ್ ಆಫೀಸರ್ ಜಾರ್ಜ್ ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಗಾಯತ್ರಿ ನಿರೂಪಿಸಿದರು.
ಬಾಕ್ಸ್ ಐಟಮ್:
ಈ ಕ್ಯಾಂಪ್‍ನಲ್ಲಿ ಶಿವಮೊಗ್ಗ, ಮಡಿಕೇರಿ, ಉಡುಪಿ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತರಬೇತಿಯ ಸಮಯದಲ್ಲಿ ಮಿಲಿಟರಿ ಡ್ರೀಲ್, ಫೀಲ್ಡ್ ಕ್ರಾಫ್ಟ್ ಮತ್ತು ಬ್ಯಾಟಲ್ ಕ್ರಾಫ್ಟ್ ಹಾಗೂ ಫೈರಿಂಗ್, ವ್ಯಕ್ತಿತ್ವ ವಿಕಸನ, ನಾಗರಿಕ ರಕ್ಷಣೆ, ಪ್ರಥಮ ಚಿಕಿತ್ಸೆ, ಆರೋಗ್ಯ ಹಾಗೂ ಸ್ವಚ್ಚತೆ ಮತ್ತು ಪರಿಸರ ಅಧ್ಯಯನ ಬಗ್ಗೆ ಕೆಡೆಟ್ಸ್‍ಗಳಿಗೆ ತರಬೇತಿ ನೀಡಲಾಯಿತು.