ವಿದ್ಯಾಗಿರಿ: ನಾವು ಆಯ್ಕೆ ಮಾಡಿವ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು. ಆಗಲೇ ನಾವು ಅತ್ಯಧಿಕ ಜ್ಞಾನವನ್ನು ಪಡೆದುಕೊಳ್ಳಬಹುದು. ಛಾಯಾಗ್ರಹಣವೆನ್ನುವುದೊಂದು ಹವ್ಯಾಸವಾದ್ದರಿಂದ ಅದನ್ನು ಬದುಕಿಗಾದಾರವಾಗುವಂತೆ ಬೆಳೆಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ರೊಟೇರಿಯನ್ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ನಡೆದ `ವೈಲ್ಡ್‍ಇನ್ ಲೆನ್ಸ್’ ಎಂಬ ಎರಡು ದಿನದ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿಗಳಾದ ವಿಶ್ವತೇಜ್.ಎಸ್. ಕೆ ಹಾಗೂ ಕಾರ್ತಿಕ್ ಸಲೆಹಿತ್ತಲ್ ತೆಗೆದ ಒಟ್ಟು 50 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಪ್ರದರ್ಶನದಲ್ಲಿ ಪ್ರಾಣಿ ಪಕ್ಷಿಗಳು, ಚಿಟ್ಟೆಗಳು, ಜೇಡರಹುಳು, ಇರುವೆ, ಕೊಕ್ಕರೆಗಳ ಫೊಟೋಗಳು ಈ ಛಾಯಾಚಿತ್ರ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದ್ದವು.
ಆಳ್ವಾಸ್ ಕಾಲೇಜಿನ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕಿ ಡಾ.ರಶ್ಮಿ ಕೆ, ಸಹ ಪ್ರಾಧ್ಯಪಕಿ ಡಾ ಶ್ರುತಿ ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.