ವಿದ್ಯಾಗಿರಿ: ಕಂಡ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬರ ಜವಬ್ದಾರಿ ಎಂದು ಧನಲಕ್ಷ್ಮಿ ಕಾಶ್ಯೂ ಎಕ್ಸ್‍ಪೋರ್ಟ್‍ನ ಮಾಲಿಕ ಕೆ. ಶ್ರೀಪತಿ ಭಟ್ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವತಿಯಿಂದ ನಡೆದ “ಸನಿಹ ಇನ್ನೂ ಸನಿಹ” ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಂಗ್‍ನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರತಿಯೊಬ್ಬರು ಸುಂದರ ಕನಸು ಕಾಣಬೇಕು.ಕಂಡ ಕನಸನ್ನು ನನಸಾಗಿಸಲು ಬೇಕಾಗುವ ಪ್ರದೇಶದ ಆಯ್ಕೆಯೂ ಕೂಡ ಪ್ರಮುಖವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಸುಪ್ತ ಪ್ರತಿಭೆಯನ್ನು ಜಾಗೃತಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂಡಬಿದಿರೆ ಚೌಟ ಪ್ಯಾಲೇಸ್‍ನ ಕುಲದೀಪ್ ಚೌಟ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ರಾಧಾರಮಣ ಧಾರವಾಹಿಯ ಸಂಭಾಷಣಾಗಾರ್ತಿ ಪದ್ಮಿನಿ ಪೃಥ್ವಿರಾಜ್ ಜೈನ್, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ, ಪದವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ರೇಷ್ಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಲ್ಬಮ್ ಸಾಂಗ್ ಕುರಿತು:
‘ಸನಿಹ ಇನ್ನೂ ಸನಿಹ’ಆಲ್ಬಮ್ ಸಾಂಗ್‍ನ್ನು ಆಳ್ವಾಸ್ ಮಲ್ಟಿ ಮೀಡಿಯಾ ಸ್ಟುಡಿಯೋ ವತಿಯಿಂದ ನಿರ್ಮಿಸಲಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಅಸೀಮಾ ಧೋಳ, ಸಾಹಿತ್ಯರಚನಾಕಾರರು ಗುರುರಾಜ ಬಾಗಲಕೋಟೆ, ಸಂಗೀತ ಮಯುರ ಅಂಬೆಕಲ್ಲು, ಹಿನ್ನಲೆ ಗಾಯನ ಅಕ್ಷತಾ ಎಸ್. ಕಾಳಹಸ್ತಿಮಠ, ನಿರ್ದೇಶನ ಶ್ರೀಗೌರಿ ಎಸ್. ಜೋಶಿ, ಛಾಯಾಗ್ರಹಣ ಅಕ್ಷಯ್‍ರೈ, ಚೈತನ್ಯ ಕುಡಿನಲ್ಲಿ, ಸಂಕಲನ ಅಕ್ಷಯ್‍ರೈ, ಗ್ರಾಫಿಕ್ಸ್ ರವಿ ಮೂಡುಕೊಣಾಜೆ.