ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ದೃಡ ಸಂಕಲ್ಪವನ್ನು ಹೊಂದಿರಬೇಕು- ಕೆ. ಆರ್. ಶಂಕರ್

edited 01

ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅವರ ಸಾಧನೆಗೆ ಪ್ರೋತ್ಸಾಹ ತುಂಬುವ ಮಹತ್ವದ ಕಾರ್ಯವನ್ನು ಕಾಲೇಜಿನ ವಾರ್ಷಿಕೋತ್ಸವಗಳು ಮಾಡಬೇಕು. ಏನೇ ಸಮಸ್ಯೆ ಬಂದರೂ ಅದನ್ನು ಮೆಟ್ಟಿ ನಿಲ್ಲುವಂತಹ ದೃಢ ಸಂಕಲ್ಪವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ದೃಡ ಸಂಕಲ್ಪವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರೊ.ಕೆ.ಆರ್. ಶಂಕರ್ ಹೇಳಿದರು.
ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಡವಳಿಕೆ ಮತ್ತು ಶಿಸ್ತು ನಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡು ಹೋಗುತ್ತದೆ. ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ. ಎಲ್ಲಿಯವರೆಗೆ ನೀವು ಪರಿಶ್ರಮ ಪಡೆಯುವುದಿಲ್ಲವೋ ಅಲ್ಲಿಯ ವರೆಗೆ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಮನುಷ್ಯನಿಗೆ ಆತ್ಮ ವಿಶ್ವಾಸವಿರಬೇಕು ಹೊರತು ಹುಂಬತನದ ಆತ್ಮವಿಶ್ವಾಸವಿರಬಾರದು. ಮಾಡುವ ಕೆಲಸದಲ್ಲಿ ಸಕರಾತ್ಮಕ ಯೋಚನೆಯಿರಬೇಕು. ಮಾಡುವ ಕೆಲಸದಲ್ಲಿ ಯೋಜನೆಯಿದ್ದರೆ ಅರ್ಧ ಕೆಲಸ ಮಾಡಿದಂತೆ. ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಬೇಕು. ಸವಾಲುಗಳು ಇಲ್ಲದ ಜೀವನ ನಿರಸದಾಯಕವಾಗಿರುತ್ತದೆ. ಪೋಷಕರನ್ನು, ಗುರುಗಳನ್ನು ಹಾಗೂ ಹಿರಿಯರನ್ನು ಗೌರವಿಸಬೇಕು. ನಿಯತಕಾಲಿಕೆಗಳನ್ನು ಓದುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಅವಕಾಶಕ್ಕಾಗಿ ಹುಡುಕಾಟ ಮಾಡಬೇಕು ಹೊರತು, ಅವಕಾಶಕ್ಕಾಗಿ ಕಾಯುತ್ತಾ ಕುಳಿತು ಕೊಳ್ಳಬಾರದು. ವಿದ್ಯಾರ್ಥಿಗಳಿಗೆ ಇಲ್ಲಿ ಹಲವು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೋಳ್ಳಬೇಕು. ಹಾಗೂ ಸಂಶೊಧನೆ ಮಾಡುವ ವಿದ್ಯಾರ್ಥಿಗಳು ಸಂಶೋಧನೆಯನ್ನು ಬಹಳ ಮುತುರ್ವಜಿಯಿಂದ ವಾಸ್ತವ ಅಂಶವನ್ನು ಸಂಶೋಧನೆಯ ಮೂಲಕ ಹೊರ ತೆಗೆಯುವಂತಾಗಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುರಿಯನ್ ಉಪಸ್ಥಿತರಿದ್ದರು.
ರಂಗೇರಿದ ವಾರ್ಷಿಕೋತ್ಸವ:-
ಮಧುವನಗಿತ್ತಿಯಂತೆ ಕಂಗೋಳಿಸುವ ವೇದಿಕೆ. ವೇದಿಕೆ ತುಂಬಾ ಬೆಳಕಿನ ಚಿತ್ತಾರ. ಸಾಧಕರಿಗೆ ಸಂದಿತು ಸನ್ಮಾನದ ಮಹಾಪುರ. ಬಣ್ಣ ಬಣ್ಣದ ಉಡುಪುಗಳೊಂದಿಗೆ ರಂಗೇರಿದ ವಿದ್ಯಾರ್ಥಿಗಳ ಓಡಾಟ- ಒಡನಾಟ ಒಂದು ಕಡೆಯಾದರೆ ಮತ್ತೊಂದು ಕಡೆ ವಿವಿಧ ಬಗೆಯ ಭರ್ಜರಿ ಊಟ ಇವೆಲ್ಲವೂ ಆಳ್ವಾಸ್ ಕಾಲೇಜು ವಾರ್ಷಿಕೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡುವುದರ ಮೂಲಕ ಸನ್ಮಾನಿಸಲಾಯಿತು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.