ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕಾದರೆ ಭಾಷೆ, ಬರವಣಿಗೆ ಅತ್ಯಗತ್ಯ : ಪ್ರತಾಪ್ ಸಿಂಹ

01 edit news mood phಮೂಡುಬಿದಿರೆ : ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕಾದರೆ ಪತ್ರಿಕೋದ್ಯಮ ಕ್ಷೇತ್ರ ಅಧ್ಯಯನ ಮಾಡಬೇಕಗಿಲ್ಲ, ಇತರ ಯಾವುದೇ ಒಂದು ಕ್ಷೇತ್ರದಲ್ಲಿ ಪ್ರತಿಭಾನ್ವಿತವಾಗಿದರೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬಹುದು ಎಂದು ಖ್ಯಾತ ಅಂಕಣಗಾರ ಪ್ರತಾಪ್ ಸಿಂಹ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಆಳ್ವಾಸ್ ಕಾಲೇಜ್‍ನ ಕುವೆಂಪು ಸಂಭಾಗಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ವಿಭಾಗ ಮತ್ತು ಸಂಚಲನ ವತಿಯಿಂದ ಆಯೋಜಿಸಲಾದ ಸಂಪಾದಕೀಯ ಪುಟ ಕುರಿತ `ಎಡಿಟ್’ ಕಾರ್ಯಾಗಾರದಲ್ಲಿ ಅಂಕಣ ಬರಹದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದ್ದಿ ವರದಿಗಾರನೇ ಬೆರೆ, ಅಂಕಣಗಾರ ಬೆರೆ. ಸುದ್ದಿ ವರದಿಗಾರನ್ನು ಇತರ ಹೇಳಿದ ಸುದ್ದಿಯ್ನು ಮಾಡುತ್ತಾನೆ ಹೋರೆತು, ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುವುದಿಲ್ಲ, ಆದರೆ ಅಂಕಣಕಾರರು ಅಭಿಪ್ರಾಯದ ಜೊತೆಗೆ ಇತರ ಅಭಿಪ್ರಾಯಗಳನ್ನು ಬಳಸಿಕೊಳ್ಳುತ್ತಾರೆ ಎಂದರು.
ಬರವಣಿಗೆ ಶೈಲಿ :
ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕದರೆ ಮೊದಲು ಬರವಣಿಗೆ, ಭಾಷೆ, ಮಾತಿನ ಶೈಲಿ ಅತ್ಯಗತ್ಯ ಎಂದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಹಾ ಪೂರವಾಗಬೇಕಾದರೆ ಇಂತಹ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬರಹಗಾರರು ಬಹಳಷ್ಟು ಕಾಣುತ್ತೇವೆ ಆದರೆ ಬರಹದಿಂದ ಓದುಗಾರಿಗೆ ಮೆಚ್ಚಿಗೆ ಪಡೆಯುವುದು ತುಂಬ ಅಪರೂಪ ಎಂದರು.
ಪತ್ರಕೋದ್ಯಮ ಶಕ್ತಿ :
ಖಡ್ಗಕ್ಕಿಂತ ಲೇಖನ ಹರಿತವಾದದ್ದು. ಪತ್ರಕರ್ತರು ಆತ್ಮ ಸಾಕ್ಷಿಯಿಂದ ಕೆಲಸ ಮಾಡಿದರೆ, ಸಮಾಜ,ದೇಶ ಅಭಿವೃದ್ಧಿ ಮಾಡಲು ಸಾಧ್ಯ. ಇವತ್ತು ಅಂಕಣ ಬರಹಗಳು ಎನ್ನುವಂತಹದ್ದು ಕಲಿಕೆಯಾಗಿದೆ, ಯಾಕೆಂದರೆ ಕಲಿಕೆ ಎನ್ನುವಂತಹದ್ದು ಎಲ್ಲರ ಸ್ವತು, ಆಂತಹ ಸ್ವತು ಕೆಲವರು ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಜೆಕೆಎಸ್ ಪದವಿ ಕಾಲೇಜಿನ ಪ್ರೋ ಹರ್ಷವರ್ಧನ ವಿ. ಶೀಲವಂತ ಅವರು ಮಾತನಾಡಿ, ಇಂದಿನ ಸುದ್ದಿ ನಾಳೆಗೆ ಹಳಸುವ ಸುದ್ದಿಯಲ್ಲ, ಅದು ಅಂಕಣ, ಸಂಪಾದಕೀಯ ಪುಟ, ಓದುಗಾರ ಸುದ್ದಿಯಾಗಬಹುದು. ಸಂಪಾದಕೀಯ ಪುಟ ಎನ್ನುವಂತಹದ್ದು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೀಸಲಾರುವಂತಹದ್ದು ಎಂದು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಪ್ರಜಾವಾಣಿ ಅಂಕಣಗಾರ ಪದ್ಮರಾಜ್ ದಂಡವತಿ ಅವರು ಪತ್ರಿಕಾ ಭಾಷೆ ಎಂಬ ಪುಸ್ತಕ ಬೆರೆದಿದ್ದಾರೆ ಅದನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಆಳ್ವಾಸ್ ಟ್ರಸ್ಟಿ ವಿವೇಕ ಅಳ್ವ, ಪ್ರಾಶುಪಾಲ ಪ್ರೋ.ಕುರಿಯನ್, ನವದೆಹಲಿ ಆರ್ಗನೇಷರ್ ವಾರ ಪತ್ರಿಕೆ ಸಂಪಾದಕ ಪ್ರಪುಲ್ ಕೇತ್ಕರ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ಉಪನ್ಯಾಸಕ ಶ್ರೀನಿವಾಸ್ ಪೇಜತ್ತಾಯ ಸ್ವಾಗತಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.